ನ.18: ಶಾಸಕ ಮಠಂದೂರುರವರಿಂದ ಒಳಮೊಗ್ರು, ಕೆದಂಬಾಡಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ

0

ಪುತ್ತೂರು: ಕೆದಂಬಾಡಿ ಹಾಗೂ ಒಳಮೊಗ್ರು ಗ್ರಾಮಗಳ ವಿವಿಧ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರುರವರು ಅನುದಾನವನ್ನು ಒದಗಿಸಿದ್ದು ಅದರ ಶಿಲಾನ್ಯಾಸ ಕಾರ್ಯಕ್ರಮ ನ.18 ರಂದು  ನಡೆಯಲಿದೆ.

ಒಳಮೊಗ್ರು ಗ್ರಾಮಕ್ಕೆ 2 ಕೋಟಿಗೂ ಮಿಕ್ಕಿ ಅನುದಾನ ಒದಗಿಸಲಾಗಿದ್ದು ಕೆದಂಬಡಿ ಗ್ರಾಮಕ್ಕೆ 2.85 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಬಹುತೇಕ ಅನುದಾನ ರಸ್ತೆ ಕಾಮಗಾರಿಗೆ ವಿನಿಯೋಗಿಸಲಾಗುತ್ತಿದೆ.

ಒಳಮೊಗ್ರು ಹಾಗೂ ಕೆದಂಬಾಡಿ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಬೇಡಿಕೆ ಇರುವ ರಸ್ತೆಗಳು ಈ ಬಾರಿ ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತನೆಯಾಗಲಿದೆ. ಕಳೆದ ಚುನಾವಣೆಯ ಸಂದರ್ಬದಲ್ಲಿ ಶಾಸಕರು ನೀಡಿದ ಭರವಸೆಯಂತೆ ಈ ಬಾರಿ ಅನುದಾನವನ್ನು ಬಿಡುಗಡೆಮಾಡಲಾಗಿದ್ದು ಎರಡೂ ಗ್ರಾಮಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ಚುರುಕುಗೊಳ್ಳಲಿದೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮತ್ತು ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಒಳಮೊಗ್ರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ ಮತ್ತು ಕೆದಂಬಡಿ ಗ್ರಾಪಂ ಅಧ್ಯಕ್ಷರಾದ ರತನ್ ರೈ ಕುಂಬ್ರ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here