ಅರುಣಾದಲ್ಲಿ ಕಾಂತಾರ 50ರ ಸಂಭ್ರಮ

0

ದಿನದಿಂದ ದಿನಕ್ಕೆ ಕ್ರೇಜ್ ಹುಟ್ಟಿಸುತ್ತಿರುವ ಸಿನಿಮಾ

ಪುತ್ತೂರು: ಕಾಂತಾರ -ಒಂದು ದಂತಕಥೆ. ಚಿತ್ರ ಬಿಡುಗಡೆಯಾಗಿ 50 ದಿನವನ್ನು ಪೂರೈಸಿದ್ದು ವಿಶ್ವದಾದ್ಯಂತ ದಿನೇದಿನೇ ಕಾಂತಾರದ ಕ್ರೇಜ್ ಹೆಚ್ಚುತ್ತಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಜುಗಲ್ಬಂದಿ ತೆರೆಮೇಲೆ ಕಮಾಲ್ ಮಾಡಿದ್ದು, ಈಗಾಗಲೇ ಒಂದು ಕೋಟಿಗೂ ಹೆಚ್ಚು ಟಿಕೆಟ್ ಮಾರಾಟವಾಗುವ ಮೂಲಕ ದಾಖಲೆಯನ್ನು ಸೃಷ್ಟಿ ಮಾಡಿದೆ. ಪುತ್ತೂರು ಅರುಣಾ ಚಿತ್ರಮಂದಿರದಲ್ಲಿಯೂ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿರುವ ಚಿತ್ರ 50 ನೇ ದಿನದತ್ತ ಹೆಜ್ಜೆಹಾಕಿದೆ.

ಭಾರತೀಯ ಚಿತ್ರರಂಗದಲ್ಲೇ ಹೊಸ ಭಾಷ್ಯ ಬರೆದ ಕಾಂತಾರ ಚಿತ್ರ ತುಳುನಾಡಿನ ಸಂಸ್ಕೃತಿ ಕಲೆ ಆಚಾರ ವಿಚಾರಗಳ ಸಂಪೂರ್ಣ ಚಿತ್ರಣವಾಗಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿಯವರ ಪಾತ್ರ ಅದ್ಭುತವಾಗಿ ಮೂಡಿಬಂದಿದ್ದು ಇವರ ಅಭಿನಯಕ್ಕೆ ಭಾರತ ಚಿತ್ರರಂಗವೇ ಫಿದಾ ಆಗಿದೆ. ಕೋರಿ ಕಟ್ಟ, ಶಿಕಾರಿ, ಕಂಬಳ, ಭೂತಕೋಲ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ತೋರಿಸಲಾಗಿದ್ದು, ಛಾಯಾಗ್ರಹಣ ರೋಮಾಂಚನ ಭರಿತವಾಗಿದೆ. ಪ್ರಕೃತಿ ಹಾಗೂ ಮನುಷ್ಯನ ನಡುವಿನ ಸಂಘರ್ಷವನ್ನು ಕೇಂದ್ರವನ್ನಾಗಿಟ್ಟುಕೊಂಡು ಸಿನಿಮಾ ನಿರ್ಮಾಣಗೊಂಡಿದ್ದು, ಹಳ್ಳಿ ಜನರ ಹಾಗೂ ದೈವಗಳ ನಡುವಿನ ಭಾವನಾತ್ಮಕ ಸಂಬಂಧಗಳನ್ನು ಎಳೆಎಳೆಯಾಗಿ ತೋರಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ನಟ ಕಿಶೋರ್, ಅಚ್ಚುತ್ ಕುಮಾರ್, ಪ್ರಮೋದ್, ಶೈನ್ ಶೆಟ್ಟಿ ಮುಂತಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜಾಗದ ವಿಚಾರವಾಗಿ ನಡೆಯುವ ಸಂಘರ್ಷದ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗಿದ್ದು, ನಟ ಕಿಶೋರ್ ಅರಣ್ಯ ಅಧಿಕಾರಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಈ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದ್ದು, ಶತಮಾನೋತ್ಸವ ಕಾಣಲಿ ಎನ್ನುವುದೇ ಚಿತ್ರಪ್ರೇಮಿಗಳ ಆಶಯವಾಗಿದೆ..

ವರದಿ: ಪೃಥ್ವಿ ಆಳ್ವ ಕಲ್ಲಡ್ಕ ಕುಂಬ್ರ, ಪತ್ರಿಕೋದ್ಯಮ ವಿದ್ಯಾರ್ಥಿನಿ

[box type=”note” bg=”#” color=”#” border=”#” radius=”15″]ದಿನಾ 4 ದೇಖಾವೆಗಳು

ಪುತ್ತೂರು ಅರುಣಾ ಚಿತ್ರಮಂದಿರದಲ್ಲಿ ದಿನಾ ಬೆಳಿಗ್ಗೆ 11, ಮಧ್ಯಾಹ್ನ 2, ಸಂಜೆ 6 ಮತ್ತು ರಾತ್ರಿ 9 ಗಂಟೆಗೆ ದಿನಾ 4 ದೇಖಾವೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಚಿತ್ರ ಪ್ರೇಮಿಗಳು ಮುಂಚಿತವಾಗಿಯೂ ಟಿಕೆಟ್ ಬುಕ್ಕಿಂಗ್ ಮಾಡುವ ಅವಕಾಶವಿದೆ . ಚಿತ್ರಮಂದಿರಕ್ಕೆ ಬಂದು ಚಿತ್ರವೀಕ್ಷಣೆ ಮಾಡುವ ಮೂಲಕ ಪ್ರೋತ್ಸಾಹಿಸಬೇಕಾಗಿ ಚಿತ್ರಮಂದಿರದ ಪ್ರಕಟಣೆ ತಿಳಿಸಿದೆ.[/box]

LEAVE A REPLY

Please enter your comment!
Please enter your name here