ಬಿಜೆಪಿ ಎಸ್.ಸಿ ಮೋರ್ಛಾ ಪರಿಶಿಷ್ಠ ಜಾತಿ ಸಮಾವೇಶ; ನಲಿಕೆ ಸಮಾಜ ಸಂಘದ ಅಧ್ಯಕ್ಷ ರವಿ ಅಜಲಾಯರಿಗೆ ಸನ್ಮಾನ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಎಸ್.ಸಿ ಮೋರ್ಛಾ ದ.ಜಿಲ್ಲೆ ವತಿಯಿಂದ ಮಂಗಳೂರು ಉರ್ವಸ್ಟೋರ‍್ಸ್‌ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಪುತ್ತೂರು ತಾಲೂಕು ನಲಿಕೆ ಸಮಾಜ ಸಂಘದ ಅಧ್ಯಕ್ಷ, ಅರಿಯಡ್ಕ ಗ್ರಾಮದ ರವಿ ಅಜಲಾಯ ಎಂಡೆಸಾಗುರವರನ್ನು ಸನ್ಮಾನಿಸಲಾಯಿತು. ರವಿ ಅಜಲಾಯರವರಿಗೆ ಪೇಟಾ ತೊಡಿಸಿ, ಶಾಲು ಹಾಕಿ, ಸ್ಮರಣಿಕೆ, ಫಲಪುಷ್ಪ, ಅಂಬೇಡ್ಕರ್ ಪ್ರತಿಮೆ, ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇತರ ಗಣ್ಯರನ್ನು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಎಸ್.ಸಿ ಮೋರ್ಛಾ ಜಿಲ್ಲಾಧ್ಯಕ್ಷ ವಿನಯ ನೇತ್ರ ದಡ್ಡಲ್‌ಕಾಡ್, ಎಸ್.ಸಿ ಮೋರ್ಛಾ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಶಾಸಕ ಅಂಗಾರ, ಶಾಸಕರುಗಳಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಭರತ್ ಶೆಟ್ಟಿ, ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.