ಡಾ.ಕೃಷ್ಣಮೂರ್ತಿ ಸಾವಿನ ಪ್ರಕರಣವನ್ನು ಎನ್.ಐ.ಎ ಹಸ್ತಾಂತರಿಸುವಂತೆ ವಿಹಿಂಪ ನೇತೃತ್ವದಲ್ಲಿ ಎಸಿ ಕಚೇರಿ ಮೂಲಕ ಗೃಹಸಚಿವರಿಗೆ ಮನವಿ

0

ಪುತ್ತೂರು: ಪುತ್ತೂರು ಮೂಲದ ವೈದ್ಯ ಡಾ. ಕೃಷ್ಣಮೂರ್ತಿ ಸರ್ಪಂಗಳ ಅವರ ಸಾವಿನ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ) ಗೆ ಹಸ್ತಾಂತರಿಸುವಂತೆ ಪುತ್ತೂರು ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ವೈದ್ಯರು ಸಹಾಯಕ ಕಮೀಷನರ್ ಕಚೇರಿ ಮೂಲಕ ರಾಜ್ಯದ ಗೃಹಸಚಿವರಿಗೆ ಮನವಿ ಸಲ್ಲಿಸಿದರು.
ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರ ಅನುಮಾನಾಸ್ಪದ ಸಾವಿನ ಕುರಿತು ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ವೈದ್ಯ ಸಮೂಹದೊಂದಿಗೆ ಪುತ್ತೂರು ಕಿಲ್ಲೆ ಮೈದಾನದ ಬಳಿಯ ಅಮರ್‌ಜವಾನ್ ಸ್ಮಾರಕ ಜ್ಯೋತಿಯ ಬಳಿ ಪ್ರತಿಭಟನೆ ನಡೆದಿತ್ತು. ವೈದ್ಯರ ಅನುಮಾನಾಸ್ಪದ ಸಾವಿನ ಕುರಿತು ಎನ್.ಐ.ಎ. ತನಿಖೆ ನಡೆಸಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸುವ ಕುರಿತು ಪ್ರತಿಭಟನೆಯಲ್ಲಿ ನಿರ್ಣಯಿಸಿ ಸ್ಥಳದಲ್ಲಿ ವೈದ್ಯರ ಸಹಿ ಪಡೆಯಲಾಗಿತ್ತು. ನ.18ರಂದು ಸರಕಾರಕ್ಕೆ ಮನವಿ ಸಹಾಯಕ ಕಮೀಷನರ್ ಕಚೇರಿ ಮೂಲಕ ಮನವಿ ಸಲ್ಲಿಸಲಾಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಕೆ. ಪ್ರಸನ್ನ, ಕಾರ್ಯದರ್ಶಿ ಸತೀಶ್, ಡಾ. ಗಣೇಶ್ ಪ್ರಸಾದ್ ಮುದ್ರಜೆ, ಡಾ. ಸುರೇಶ್ ಪುತ್ತೂರಾಯ, ಸಂಕಪ್ಪ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here