ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಂಬೆಕ್ಕಾನ ಸದಾಶಿವ ರೈಯವರಿಗೆ ರೋಯಲ್ ಸೌಹಾರ್ದ ಸಹಕಾರಿ ಸಂಘದಲ್ಲಿ ಗೌರವ ಸನ್ಮಾನ

0

 

  • ಸಹಕಾರಿ ಕ್ಷೇತ್ರದ ತ್ಯಾಗಕ್ಕೆ ಸಂದ ಪ್ರಶಸ್ತಿ-ಹೇಮನಾಥ ಶೆಟ್ಟಿ ಕಾವು
  • ಪ್ರಶಸ್ತಿಗಾಗಿ ಅರ್ಜಿ ಹಾಕಿ ಹೋದವನಲ್ಲ-ದಂಬೆಕ್ಕಾನ ಸದಾಶಿವ ರೈ

ರಾಮ ಭಟ್ ಅವರ ಮನೆಗೆ ಭೇಟಿ
ರೋಯಲ್ ಸೌಹಾರ್ದ ಸಹಕಾರಿ ಸಂಘದಲ್ಲಿ ಸನ್ಮಾನ ಸ್ವೀಕರಿಸಿದ ದಂಬೆಕ್ಕಾನ ಸದಾಶಿವ ರೈ ಅವರು ಬಳಿಕ ಮಾಜಿ ಶಾಸಕ ಉರಿಮಜಲು ರಾಮ ಭಟ್ ಅವರ ಮನೆಗೆ ತೆರಳಿ ಅಲ್ಲಿ ದಿ.ರಾಮ ಭಟ್ ಅವರ ಭಾವಚಿತ್ರದ ಎದುರು ಪ್ರಶಸ್ತಿಯನ್ನು ಇರಿಸಿ ಗೌರವ ಸಮರ್ಪಣೆ ಮಾಡಿದರು.ಬಳಿಕ ಮಾತನಾಡಿದ ಅವರು, 1988ರಿಂದ ನನಗೆ ಗುರು ಮತ್ತು ಹಿತ ಚಿಂತಕರಾಗಿದ್ದ ರಾಮ ಭಟ್ ಅವರ ಪಾದಾರವಿಂದಕ್ಕೆ ಪ್ರಶಸ್ತಿ ಸಮರ್ಪಣೆ ಮಾಡುತ್ತಿದ್ದೇನೆ.ನನ್ನನ್ನು ಗುರುತಿಸಿದ ಗುರು ರಾಮ ಭಟ್ ಅವರ ಮಾರ್ಗದರ್ಶನದಿಂದ ಸಂಘಟನೆಯಲ್ಲಿ ನಾನು ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.ಈ ವೇಳೆ ದಂಬೆಕ್ಕಾನ ಸದಾಶಿವ ರೈ ಮತ್ತು ಪ್ರಭಾವತಿ ದಂಪತಿ ಅವರು ಸವಿತಾ ರಾಮ್ ಭಟ್ ಅವರನ್ನು ಗೌರವಿಸಿದರು.ರಾಮ ಭಟ್‌ರವರ ಪುತ್ರಿ, ಮೊಮ್ಮಗಳು, ಮೊಮ್ಮಗಳ ಗಂಡ, ಮರಿಮಗಳು ಉಪಸ್ಥಿತರಿದ್ದರು.

ಪುತ್ತೂರು:ರಾಜ್ಯ ಸರಕಾರದಿಂದ ರಾಜ್ಯ ಮಟ್ಟದಲ್ಲಿ ನೀಡಲಾಗುವ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ಹಿರಿಯ ಸಹಕಾರಿ ದಂಬೆಕ್ಕಾನ ಸದಾಶಿವ ರೈ ಅವರನ್ನು ಪುತ್ತೂರು ರೋಯಲ್ ಸೌಹಾರ್ದ ಸಹಕಾರಿ ಸಂಘದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.ರೋಯಲ್ ಸೌಹಾರ್ದ ಸಹಕಾರಿಯ ಸ್ಥಾಪಕಾಧ್ಯಕ್ಷರೂ ಆಗಿರುವ ದಂಬೆಕ್ಕಾನ ಸದಾಶಿವ ರೈಯವರು ಪ್ರಶಸ್ತಿ ಸ್ವೀಕರಿಸಿ ಪುತ್ತೂರಿಗೆ ಆಗಮಿಸಿ ಬಿಜೆಪಿ ಕಚೇರಿ ಮತ್ತು ರೋಯಲ್ ಸೌಹಾರ್ದ ಸಹಕಾರಿ ಸಂಘದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಬಳಿಕ ಮಾಜಿ ಶಾಸಕ ಉರಿಮಜಲು ರಾಮ ಭಟ್ ಅವರ ಮನೆಗೆ ತೆರಳಿ ರಾಮ ಭಟ್ ಅವರ ಭಾವ ಚಿತ್ರದ ಎದುರು ಪ್ರಶಸ್ತಿ ಇರಿಸಿ ಗೌರವ ಸಲ್ಲಿಸಿದರು.
ಸಹಕಾರಿ ಕ್ಷೇತ್ರದ ತ್ಯಾಗಕ್ಕೆ ಸಂದ ಪ್ರಶಸ್ತಿ: ರೋಯಲ್ ಸೌಹಾರ್ದ ಸಹಕಾರಿ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ ದಂಬೆಕ್ಕಾನ ಸದಾಶಿವ ರೈ ಅವರಿಗೆ ಲಭಿಸಿದ ಪ್ರಶಸ್ತಿ ಪುತ್ತೂರಿಗೆ ಕೀರ್ತಿ ತಂದಿದೆ.ಸಹಕಾರಿ ಕ್ಷೇತ್ರದಲ್ಲಿ ಅವರ ತ್ಯಾಗಕ್ಕೆ ಇವತ್ತು ಪ್ರಶಸ್ತಿ ಲಭಿಸಿದೆ ಎಂದರಲ್ಲದೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ಹಿನ್ನಲೆಯಲ್ಲಿ ದೊಡ್ಡ ಸಂಭ್ರಮದ ಕಾರ್ಯಕ್ರಮ ಮಾಡಬೇಕೆಂದಿದ್ದೇವೆ ಎಂದರು.ಒಳ್ಳೆಯತನವನ್ನು ಗುರುತಿಸುವ ಕೆಲಸದೊಂದಿಗೆ ನೇರ ನಡೆನುಡಿಯ ವ್ಯಕ್ತಿತ್ವ ಹೊಂದಿರುವ ಮತ್ತು ಒಳ್ಳೆತನಕ್ಕೆ ಪ್ರೋತ್ಸಾಹ ನೀಡುವ ದಂಬೆಕ್ಕಾನ ಅವರಿಂದ ಸಮಾಜಕ್ಕೆ ಉತ್ತಮ ಸಂದೇಶ ಸಿಕ್ಕಿದೆ ಎಂದು ಹೇಮನಾಥ ಶೆಟ್ಟಿ ಹೇಳಿದರು.
ಪ್ರಶಸ್ತಿಗಾಗಿ ಅರ್ಜಿ ಹಾಕಿ ಹೋದವನಲ್ಲ: ರೋಯಲ್ ಸೌಹಾರ್ದ ಸಹಕಾರಿಯಲ್ಲಿ ಸಂಘದ ಗೌರವ ಸನ್ಮಾನ ಸ್ವೀಕರಿಸಿದ ದಂಬೆಕ್ಕಾನ ಸದಾಶಿವ ರೈಯವರು ಮಾತನಾಡಿ,ರಾಜ್ಯ ಸರಕಾರದಿಂದ ಪುರಸ್ಕರಿಸಲ್ಪಟ್ಟ ಸಹಕಾರ ರತ್ನ ಪ್ರಶಸ್ತಿ ನನಗಲ್ಲ.ನನ್ನೊಂದಿಗೆ ಕುಟುಂಬ ಸದಸ್ಯರಾಗಿರುವವರಿಗೆಲ್ಲರಿಗೂ ಸಂದ ಪ್ರಶಸ್ತಿಯಾಗಿದೆ.ಇದರೊಂದಿಗೆ ಪ್ರಥಮವಾಗಿ ನನ್ನ ಗುರು ದಿ.ರಾಮ ಭಟ್ ಅವರಿಗೆ ಸಮರ್ಪಣೆ ಮಾಡುತ್ತೇನೆ.ಈ ಪ್ರಶಸ್ತಿಗೆ ನನಗೆ ಪ್ರಮೋದ್ ಕುಮಾರ್ ರೈ ಅವರು ಪ್ರಸ್ತಾವನೆ ಮಾಡಿದ್ದರು.ಆದರೆ ನಾನು ಇದಕ್ಕೆ ಒಪ್ಪಲಿಲ್ಲ.ನಾನು ಪ್ರಶಸ್ತಿಗಾಗಿ ಅರ್ಜಿ ಹಾಕುವುದಿಲ್ಲ ಎಂದಿದ್ದೆ.ಯಾಕೆಂದರೆ ನಾನು ಜೀವನದಲ್ಲಿ ಅರ್ಜಿ ಹಾಕಿ ಅದರ ಬೆನ್ನ ಹಿಂದೆ ಹೋದವನಲ್ಲ.ಬಂಟರ ಸಂಘದಲ್ಲೂ ನಾನು ಪದಾಧಿಕಾರಿ ಹುದ್ದೆ ಬಯಸಿದವನಲ್ಲ ಆದರೂ ಆಯ್ಕೆ ಮಾಡಿದ್ದರು.ಬಿಜೆಪಿಯಲ್ಲೂ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು.ನಾನು ಸತ್ಯ, ನ್ಯಾಯ, ಧರ್ಮದಿಂದ ಬದುಕಿದವ ಎಂದರು.ಸಂಘದ ಅಭಿವೃದ್ಧಿಗೆ ಹೇಮನಾಥ ಶೆಟ್ಟಿಯವರೂ ಕಾರಣೀಭೂತರಾಗಿದ್ದಾರೆ.ಅವರು ಹೃದಯವಂತ ಮನುಷ್ಯ. ನಾನು ಬಿಜೆಪಿ, ಅವರು ಕಾಂಗ್ರೆಸ್ ಆಗಿದ್ದರೂ ನಮ್ಮಲ್ಲಿ ಭೇದಬಾವವಿಲ್ಲ ಎಂದರು.ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ದಂಬೆಕ್ಕಾನ ಸದಾಶಿವ ರೈ ಅವರ ಪತ್ನಿ ಪ್ರಭಾವತಿ ಎಸ್.ರೈ, ಪುತ್ರ ಅಕ್ಷಯ್ ರೈ, ಸಂಬಂಧ ತ್ರಿಶಾಲ ರೈ, ಪ್ರಸನ್ನ ಕುಮಾರ್ ಮಾರ್ತ, ಸುನಿಲ್ ರೈ ಸಾಗು, ಶ್ಯಾಮ್‌ಸುಂದರ ರೈ, ಪುರಂದರ ರೈ ಮಠ, ಅಮರ್‌ನಾಥ ರೈ ದರ್ಬೆ, ಜಯಪ್ರಕಾಶ್ ರೈ ನೂಜಿಬೈಲು, ಲೋಕನಾಥ ಪಕಳ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಸುನಿಲ್ ಗೌಡ ಪಜಿಮಣ್ಣು, ಆನಂದ ರೈ, ರವಿಪ್ರಸಾದ್ ಶೆಟ್ಟಿ, ರೋಯಲ್ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಽಕಾರಿ ಯಶವಂತ್, ಸಿಬ್ಬಂದಿ ರಕ್ಷಿತ್ ಯು. ಉಪಸ್ಥಿತರಿದ್ದರು.
ಬಿಜೆಪಿ ಕಚೇರಿಯಲ್ಲಿ ಸನ್ಮಾನ: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತಗೊಂಡ ದಂಬೆಕ್ಕಾನ ಸದಾಶಿವ ರೈ ಅವರು ಆರಂಭದಲ್ಲಿ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದರು.ಅಲ್ಲಿ ಭಾರತ ಮಾತೆಯ ಭಾವಚಿತ್ರದ ಮುಂದೆ ಪ್ರಶಸ್ತಿಯನ್ನು ಇರಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲದ ವತಿಯಿಂದ ದಂಬೆಕ್ಕಾನ ದಂಪತಿಯನ್ನು ಗೌರವಿಸಲಾಯಿತು.ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಆರ್ಯಾಪು ಶಕ್ತಿ ಕೇಂದ್ರದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಬಲ್ನಾಡು, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ ಕುಲಾಲ್, ಪ್ರಸನ್ನ ಮಾರ್ತ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here