ನ. 20: ಬೆಟ್ಟಂಪಾಡಿ‌ ದೇವಾಲಯದಲ್ಲಿ ‘ಸಂವರ್ಧನ’ ಧಾರ್ಮಿಕ ಶಿಕ್ಷಣ ಕಾರ್ಯಕ್ರಮ

ಬೆಟ್ಟಂಪಾಡಿ: ಹಿಂದು ಸಮಾಜದ ಮಕ್ಕಳಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಕಾರ್ಯಕ್ರಮ ಪ್ರತೀ ಆದಿತ್ಯವಾರ ನಡೆಯುತ್ತಿದ್ದು, ಇದರ ಅಂಗವಾಗಿ ಮಕ್ಕಳಿಗೆ ವಿವಿಧ ಚಟುವಟಿಕೆ, ಪೋಷಕರಿಗೆ ಮಾಹಿತಿ ಕಾರ್ಯಗಾರ ಸೇರಿದಂತೆ ಅರ್ಧ‌ದಿನದ ವಿನೂತನ ಕಾರ್ಯಕ್ರಮ‌ ‘ಸಂವರ್ಧನ’ ನ. 20 ರಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ನಡೆಯಲಿದೆ.
ಪೂರ್ವಾಹ್ನ ಭಜನೆ, ಯೋಗ ,ಧ್ಯಾನ, ಉಪಾಹಾರ, ನೋಂದಣಿ‌ ನಡೆಯಲಿದೆ. ‌ಬಳಿಕ ಮಕ್ಕಳಿಗೆ ಕ್ರಾಪ್ಟ್ ತರಗತಿ ನಡೆದು ಬಳಿಕ ಪೋಷಕರೊಂದಿಗೆ ಸಂವಾದ ನಡೆಯಲಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ, ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುಧಾ ಎಸ್. ರಾವ್ ಸಂವಾದ ನಡೆಸಿಕೊಡಲಿದ್ದಾರೆ. ನಂತರ ಕಥಾಸರಣಿ ನಡೆಯಲಿದೆ. ಬಳಿಕ ಮಹಾಪೂಜೆಯಾಗಿ, ಪ್ರಸಾದ ವಿತರಣೆಯಾಗಿ ಸಹಭೋಜನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರತಿ ಮನೆಯಿಂದ ಪೋಷಕರು ತಮ್ಮ ಮಕ್ಕಳೊಡನೆ ಭಾಗವಹಿಸಿ ಹಿಂದು ಸಮಾಜದ ಉನ್ನತಿಗಾಗಿ ತಮ್ಮ ಮಕ್ಕಳಲ್ಲಿ ಧಾರ್ಮಿಕ ಶಿಕ್ಷಣದ ಬೇರೂರಿಸುವಲ್ಲಿ ತಾವೂ ಭಾಗಿಗಳಾಗುವಂತೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್,‌ ಮೊಕ್ತೇಸರ‌ ವಿನೋದ್ ರೈ ಗುತ್ತು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.