ಜಿಲ್ಲಾ ಮಟ್ಟದ ಆಹ್ವಾನಿತ ಮ್ಯಾಟ್ ಕಬಡ್ಡಿ ಟೂರ್ನಮೆಂಟ್ – ಫಿಲೋಮಿನಾ ಪಿಯು ಕಾಲೇಜು ರನ್ನರ‍್ಸ್

ಪುತ್ತೂರು: ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಜಿಲ್ಲಾ ಮಟ್ಟದ ಆಹ್ವಾನಿತ ಮ್ಯಾಟ್ ಕಬಡ್ಡಿ ಟೂರ್ನಮೆಂಟಿನಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ರನ್ನರ್ಸ್ ಪ್ರಶಸ್ತಿ ಗಳಿಸಿದೆ.

ದ್ವಿತೀಯ ವಾಣಿಜ್ಯ ವಿಭಾಗದ ಮೊಹಮದ್ ಮಿಹಾದ್‌ರವರು ಉತ್ತಮ ರೈಡರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ತಂಡದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಕಿಶನ್ ರೈ ಎನ್, ಮೊಹಮದ್ ತಾಜುದ್ಧೀನ್, ಶಿವನೀತ್, ಮೊಹಮದ್ ಮುಝಮಿಲ್, ದ್ವಿತೀಯ ಕಲಾ ವಿಭಾಗದ ಕೌಶಿಕ್, ಮೊಹಮದ್ ರಾಝಿ, ಪ್ರಥಮ ವಾಣಿಜ್ಯ ವಿಭಾಗದ ಅಹಮದ್ ರಾಫಿ, ಮೊಹಮದ್ ನೌಫಲ್, ಲತಿನ್ ಭಂಡಾರಿ, ಪ್ರಥಮ ಕಲಾ ವಿಭಾಗದ ಮೊಹಮದ್ ಮುಝಮಿಲ್‌ರವರು ಭಾಗವಹಿಸಿರುತ್ತಾರೆ. ತಂಡಕ್ಕೆ ಹಬೀಬ್ ಮಾಣಿರವರು ತರಬೇತಿಯನ್ನು ನೀಡಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾ, ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.