ಫಿಲೋಮಿನಾದಲ್ಲಿ ಉದ್ಯಮಶೀಲತೆ, ಆವಿಷ್ಕಾರ ಬಗ್ಗೆ ಕಾರ್ಯಾಗಾರ

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳೊಂದಾದ ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ, ನಿರ್ವಹಣಾ ಸಂಘ ಹಾಗೂ ಇನ್ಸ್ಟಿಟ್ಯೂಶನ್ ಇನೊವೇಶನ್ ಕೌನ್ಸಿಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ನಿರ್ವಹಣಾ ಸಂಘದ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಉದ್ಯಮಶೀಲತೆ ಹಾಗೂ ಆವಿಷ್ಕಾರ ಎಂಬ ವಿಷಯದ ಕುರಿತು ಕಾರ್ಯಗಾರವು ಕಾಲೇಜಿನ ಬೆಳ್ಳಿ ಹಬ್ಬದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರಿನ ವರದರಾಜ ಟ್ರೇಡರ್ಸ್‌ನ ಮಾಲಕರಾದ ಕೃಷ್ಣಾನಂದ ನಾಯಕ್‌ರವರು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಧನಾತ್ಮಕ ಚಿಂತನೆಗಳ ಬಗ್ಗೆ ಅರಿವು ಮೂಡಿಸುತ್ತಾ ವಿದ್ಯಾರ್ಥಿಗಳು ತಮ್ಮಲ್ಲಿ ಸುಪ್ತವಾದ ಪ್ರತಿಭೆಯನ್ನು ಗುರುತಿಸಿ ಸಾಧನೆ ಮಾಡಲು ಪ್ರೇರೇಪಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಮೈಗೂಡಿನಿಕೊಳ್ಳುವಂತಾಗಬೇಕು ಎಂದರು.

ನಂತರ ಉದ್ಯಮಶೀಲತೆ ಹಾಗೂ ಆವಿಷ್ಕಾರ ಎಂಬ ವಿಷಯದ ಕುರಿತಾದ ಕಾರ್ಯಗಾರವನ್ನು ಆನ್‌ಲೈನ್ ಮೂಲಕ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಜಿರೆಯ ಸಂಧ್ಯಾ ಫ್ರೆಶ್ ಸಂಸ್ಥೆಯ ಮಾಲಕಿಯಾದ ಶ್ರೀಮತಿ ಅರ್ಚನಾ ಆರ್.ಪೈರವರು ಉದ್ಯಮಶೀಲತೆಯ ಬಗ್ಗೆ ವಿವರಿಸಿದರು. ಕಾರ್ಯಗಾರದ ಬಳಿಕ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಉದ್ಯಮಶೀಲತೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.

ವೇದಿಕೆಯಲ್ಲಿ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ|ರಾಧಾಕೃಷ್ಣ ಗೌಡ ಹಾಗೂ ಇನ್ಸ್ಟಿಟ್ಯೂಶನ್ ಇನೊವೇಶನ್ ಕೌನ್ಸಿಲ್‌ನ ಸಂಯೋಜಕರಾದ ಅಭಿಷೇಕ್ ಸುವರ್ಣ ಉಪಸ್ಥಿತರಿದ್ದರು. ಹರ್ಷಿತಾ ಮತ್ತು ಬಳಗ ಪ್ರಾರ್ಥಿಸಿದರು. ನಿರ್ವಹಣಾ ಸಂಘದ ಅಧ್ಯಕ್ಷ ಭವಿತ್ ಸ್ವಾಗತಿಸಿದರು. ನಿರ್ವಹಣಾ ಸಂಘದ ಸಂಯೋಜಕ ಪ್ರಶಾಂತ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರೀಕ್ಷಾ ಮತ್ತು ಮನೋಜ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಮಹಮ್ಮದ್ ಸುಹೈಲ್ ವಂದಿಸಿದರು. ದೇವಿಕಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.