ಕಿದು ಕಿಸಾನ್ ಮೇಳದಲ್ಲಿ ಗಮನ ಸೆಳೆಯುತ್ತಿರುವ ಪುತ್ತೂರಿನ ಅದ್ಭುತ ಹಲಸು

0

ಪುತ್ತೂರು: ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಜ್ಯಾಕ್ ಅನಿಲ್ ಅವರ ಪುತ್ತೂರಿನ ಅದ್ಭುತ ಹಲಸು ಕಿದು ಸಿಪಿಸಿಆರ್‌ಐ ಆವರಣದಲ್ಲಿ ನಡೆಯುತ್ತಿರುವ ಕಿಸಾನ್ ಮೇಳದಲ್ಲಿ ಗಮನ ಸೆಳೆಯುತ್ತಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದ್ದ ಕೃಷಿ ಮೇಳದಲ್ಲಿ ಭಾಗವಹಿಸಿ, ಮೆಚ್ಚುಗೆ ಗಳಿಸಿದ್ದ ಪುತ್ತೂರಿನ ಅದ್ಭುತ ಹಲಸು ಇದೀಗ ಕಿದುವಿನ ಕಿಸಾನ್ ಮೇಳದಲ್ಲೂ ಸೇವೆಗೆ ಸಿದ್ಧವಾಗಿದೆ. ಇದರಿಂದ ರೈತರಿಗೆ ಸುಲಭವಾಗಿ ಉತ್ತಮ ತಳಿಯ ಹಲಸಿನ ಗಿಡಗಳು ಲಭ್ಯವಾಗಲಿದೆ. ಸಭಾಂಗಣದ ಹಿಂದಿನ ಭಾಗದಲ್ಲಿ ಹಾಕಲಾಗಿರುವ ಸ್ಟಾಲ್‌ನಲ್ಲಿ ಪುತ್ತೂರಿನ ಅದ್ಭುತ ಹಲಸಿನ ಸ್ಟಾಲ್ ಹೆಸರೇ ಗ್ರಾಹಕರನ್ನು ಕೈಬೀಸಿ ಕರೆಯುತ್ತಿದೆ.

ಹಲಸಿನ ನರ್ಸರಿಯಲ್ಲಿ ಜ್ಯಾಕ್ ಅನಿಲ್ ಅವರದ್ದು ಬಹುದೊಡ್ಡ ಕೃಷಿ. ಬೇರೆ ಬೇರೆ ದೇಶಗಳ ಹಲಸುಗಳನ್ನು ಸಂಗ್ರಹಿಸಿ ತಂದು, ಇಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಅವನ್ನು ಬೆಳೆಸಿರುವುದು ಅವರ ಹೆಚ್ಚುಗಾರಿಕೆ. ಹಲಸು ಎಂದರೆ, ಅದಕ್ಕೆ ಒಂದು ಸೀಸನ್ ಎಂದಿತ್ತು. ಆದರೆ ಈಗ ಹಾಗಿಲ್ಲ. ವರ್ಷದ ಎಲ್ಲಾ ದಿನಗಳಲ್ಲೂ ಫಲ ನೀಡುವ ಹಲಸಿನ ಗಿಡಗಳು ಜ್ಯಾಕ್ ಅನಿಲ್ ಅವರ ಬತ್ತಳಿಕೆಯಲ್ಲಿದೆ.

ವೈವಿಧ್ಯ ರೀತಿಯ ಹಲಸಿನ ಗಿಡಗಳು ಪುತ್ತೂರಿನ ಅದ್ಭುತ ಹಲಸು ಸ್ಟಾಲ್‌ನಲ್ಲಿದೆ. ವೈವಿಧ್ಯ ಹಲಸಿನ ಜೊತೆಗೆ ಮಲ್ಲಿಕಾ, ತೋತಾಪುರಿ, ಮುಂಡಪ್ಪ ಸೇರಿದಂತೆ ವೈವಿಧ್ಯ ತಳಿಯ ಮಾವಿನ ಗಿಡಗಳು, ತೆಂಗು, ಕಸಿ ಅಂಬಟೆ ಗಿಡಗಳು ಗಮನ ಸೆಳೆಯುತ್ತಿವೆ.

ವೈವಿಧ್ಯ ತಳಿಯ ಹಲಸಿನ ಗಿಡಗಳು; ಕಳೆದ 25ವರ್ಷಗಳಿಂದ ಪುತ್ತೂರಿನಲ್ಲಿ ಸಕ್ರೀಯವಾಗಿರುವ ಜ್ಯಾಕ್ ಅನಿಲ್ ಅವರ ನಿನ್ನಿಕಲ್ಲು ನರ್ಸರಿ, ಕಿದು ಕಿಸಾನ್ ಮೇಳದಲ್ಲಿ ಗಮನ ಸೆಳೆಯುತ್ತಿದೆ. ಇಲ್ಲಿ ಪುತ್ತೂರಿನ ಅದ್ಬುತ ಹಲಸು ಸ್ಟಾಲ್‌ನಲ್ಲಿ ವೈವಿಧ್ಯ ಹಲಸಿನ ಗಿಡಗಳನ್ನು ಕಾಣಬಹುದು. ಅದರಲ್ಲಿ ಕೆಲವನ್ನು ಹೆಸರಿಸುವುದಾದರೆ – ಕೇವಲ ಒಂದೂವರೆ ವರ್ಷಕ್ಕೆ ಫಸಲು ನೀಡುವ ವಿಯೆಟ್ನಾಂನ ಆಲ್ ಸೀಸನ್ ಹಲಸಿನ ಗಿಡ. ಕಿಸಾನ್ ಮೇಳದ ಆಕರ್ಷಣೆಯ ಬಿಂದುವಾಗಿ, ಈ ತಳಿಯ ಗಿಡಗಳಿಗೆ ರಿಯಾಯಿತಿಯನ್ನು ನೀಡಿದ್ದಾರೆ. ಇದರ ಜೊತೆಗೆ ತುಮಕೂರು ಖ್ಯಾತಿಯ ಸಿದ್ದು ಹಲಸು, ಮಾಯಣ ಇಲ್ಲದ ಹಲಸು, ಫೈನಾಪಲ್ ಜ್ಯಾಕ್, ಕೆಂಪು ಸೋಳೆಯ ಚಂದ್ರಹಲಸು ಮುಂತಾದ ಹಲಸಿನ ಗಿಡಗಳಿವೆ.

 

ನನ್ನಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚು ತಳಿಯ ಹಲಸಿನ ಗಿಡಗಳಿವೆ. ಅದರಲ್ಲಿ ಆಯ್ದ ೧೦ ತಳಿಯ ಗಿಡಗಳನ್ನು ಕಿದುವಿನ ಕಿಸಾನ್ ಮೇಳದಲ್ಲಿ ಇಟ್ಟಿದ್ನೆದೆ. ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಹಲಸಿನ ಮಹತ್ವವನ್ನು ಜನರು ಅರಿತುಕೊಂಡಿದ್ದಾರೆ.
– ಜ್ಯಾಕ್ ಅನಿಲ್, ಮಾಲಕರು, ನಿನ್ನಿಕಲ್ಲು ನರ್ಸರಿ, ಅಳಕೆಮಜಲು
 9448778497

LEAVE A REPLY

Please enter your comment!
Please enter your name here