ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಪುತ್ತೂರು: ನ.15ರಂದು ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್‍ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮಾಯಿದೆ ದೇವುಸ್ ಶಿಕ್ಷಣ ಸಮೂಹ ಸಂಸ್ಥಗಳೊಂದಾದ ಸಂತ ವಿಕ್ಟರ್ ಬಾಲಿಕ ಪೌಢ ಶಾಲೆಯ ಸಂಚಾಲಕರು ಆಗಿರುವ ಅತಿ ವಂದನೀಯ ಫಾ| ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ ಮಕ್ಕಳು ಈ ನಾಡಿನ ಕಣ್ಮಣಿಗಳು, ಈ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವವರು. ಮಕ್ಕಳಿಗೆ ಅವರ ಕನಸಿನ ಬಗ್ಗೆ ಗುರಿ ಇಟ್ಟು ಕೊಳ್ಳುವುದಕ್ಕೆ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಈ ಕಾರ್‍ಯಕ್ರಮಕ್ಕೆ ಆಗಮಿಸಿದ ಮಾಯಿದೆ ದೇವುಸ್ ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರಾದ ಕು| ಫಾತಿಮತ್ ಬುಶ್ರಾ ಮತ್ತು ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ಕು| ಮರಿಯಮ್ ಖಾನ್‌ರವರು ಮಾತನಾಡಿ ಈ ದಿನದ ಸುಗಂಧವು ಚಿರಕಾಲ ಪಸರಿಸಲಿ, ನಮ್ಮೆಲ್ಲರ ಒಡಲಾಳದ ಬಂಧವು ಹಚ್ಚ – ಹಸಿರಾಗಿರಲಿ ಎಂದು ಅತಿಥಿ ನೆಲೆಯಲ್ಲಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿದ ಹೆಣ್ಣು ಮಕ್ಕಳ ಸುರಕ್ಷಾ ಸಮಿತಿಯ ಸಂಯೊಜಕಿ ಶ್ರೀಮತಿ ಉದಯ ಕುಮಾರಿಯವರು ಮಾತನಾಡಿ ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಅ.28 ಮತ್ತು ಅ.29 ರಂದು ಸಂತ ಫಿಲೋಮಿನಾ ಕ್ರೀಡಾಂಗಣದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತಾದ ವಿದ್ಯಾರ್ಥಿನಿಯರಿಗೆ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಆಟೋಟ ಸ್ಪರ್ಧೆಗಳಲ್ಲಿ, ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಹಾಗೂ ಸ್ವಚ್ಛತಾ ಪಕ್ವಾಡದ ಅಂಗವಾಗಿ ಘೋಷಣಾ ವಾಕ್ಯಗಳನ್ನು ರಚಿಸಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಮುಖ್ಯ ಶಿಕ್ಷಕಿಯವರಾದರೋಸಲಿನ್ ಲೋಬೊರವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ ಶುಭಹಾರೈಸಿದರು. ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿರುವ  ರಮೇಶ್ ಕೆ ವಿ, ಎಲ್ಲಾ ತರಗತಿ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ  ರೂಪರವರು ವಂದಿಸಿ, ಶಿಕ್ಷಕಿಸ್ಮಿತಾ ಕೆ ಯಸ್ ರವರು ಕಾರ್‍ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರಿಂದ ಮನೋರಂಜನಾ ಕಾರ್‍ಯಕ್ರಮವನ್ನು ನಡೆಸಲಾಯಿತು. ಕೊನೆಗೆ ಶಿಕ್ಷಕ ವೃಂದದವರಿಂದ ಸಿಹಿ ತಿಂಡಿ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.