ರಾಮಕುಂಜ ಪ.ಪೂ.ಕಾಲೇಜಿಗೆ ಪ್ರಾಜೆಕ್ಟರ್, ಕಪಾಟು ಕೊಡುಗೆ

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ 2009-10ರ ಬ್ಯಾಚಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತಾವು ಕಲಿತ ವಿದ್ಯಾಸಂಸ್ಥೆಗೆ ಪ್ರೊಜೆಕ್ಟರ್ ಒಂದನ್ನು ಕೊಡುಗೆಯಾಗಿ ನೀಡಿ ಕಾಲೇಜಿನಲ್ಲಿ ಕಲಿಕೆಗೆ ಉತ್ತಮ ವಾತಾವರಣವನ್ನು ನಿರ್ಮಿಸುವಲ್ಲಿ ಸಹಕರಿಸಿದರು.


ಕಾಲೇಜಿನ ಹಿರಿಯ ವಿದ್ಯಾರ್ಥಿ ಮತ್ತು ಬೆಂಗಳೂರಿನಲ್ಲಿ ಲೆಕ್ಕಪರಿಶೋಧಕರಾಗಿರುವ ಭುವನೇಶ್ ಬುಡಲೂರು ನೇತೃತ್ವದಲ್ಲಿ ವಿದ್ಯಾರ್ಥಿಗಳು ಕೊಡುಗೆ ಹಸ್ತಾಂತರಿಸಿದರು. ಕೊಣಾಲು ಗ್ರಾಮದ ಅಂಬರ್ಜೆ ಮೋಹನ ಪೂಜಾರಿ ದಂಪತಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿಗೆ ಕಪಾಟು ಒಂದನ್ನು ನೀಡಿದರು. ತಮ್ಮ ಮಗಳು ದಿ| ಶ್ರೇಯಾಳ ಸ್ಮರಣಾರ್ಥ ನೀಡಿದ ಕಪಾಟಿನ ಕೀಲಿಕೈಯನ್ನು ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣರವರು, ದಾನಿಗಳು ನೀಡಿದ ಈ ಕಲಿಕಾ ಪೂರಕ ವಸ್ತುಗಳು, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಮರ್ಪಣಾ ಭಾವದಿಂದ ಕೊಡುಗೆ ನೀಡಿದ ಎಲ್ಲರಿಗೂ ಭಗವಂತ ಸುಖ ಶಾಂತಿ ನೀಡಲಿ ಎಂದು ಹೇಳಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಕೆ, ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.