ನರಿಮೊಗರು: ಸಂಜೀವಿನಿ ಮಾಸಿಕ ಸಂತೆಯ ಉದ್ಘಾಟನೆ

ಸಾವಯವ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಉತ್ತಮ ವೇದಿಕೆ-ಸುಧಾಕರ ಕುಲಾಲ್

ಪುತ್ತೂರು: ಶ್ರೀ ದುರ್ಗಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ನರಿಮೊಗರು, ಸಂಜೀವಿನಿ ಮಾಸಿಕ ಸಂತೆಯ ಉದ್ಘಾಟನೆಯನ್ನು ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ್ ಕುಲಾಲ್ ಉದ್ಘಾಟಿಸಿದರು. ಗ್ರಾಮೀಣ ಜನರು ಸಾವಯವ ಕೃಷಿ ಪದ್ಧತಿ ಬಳಸಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಇದು ಉತ್ತಮ ವೇದಿಕೆ ಎಂದು ಹೇಳಿ ಶುಭ ಹಾರೈಸಿದರು.

ತಾಲೂಕು ವ್ಯವಸ್ಥಾಪಕ ಜಗತ್ ಕೆ ಅವರು ಸಂಜೀವಿನಿ ಸಂತೆ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು. ನರಿಮೊಗರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿಚಂದ್ರರವರು ಗ್ರಾಮೀಣ ಪ್ರದೇಶದ ಜನರು ಸಾವಯವ ಉತ್ಪನ್ನವನ್ನು ಉಪಯೋಗಿಸುವ ವಿಷಯದಲ್ಲಿ ಮಾಹಿತಿ ನೀಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಗ್ರಾ.ಪಂ ಕಾರ್ಯದರ್ಶಿ ಖಲಂದರ್, ಗ್ರಾ.ಪಂ ಸದಸ್ಯರಾದ ನವೀನ್ ರೈ, ಪುರಂದರ, ಗಣೇಶ್, ಜಯಲಕ್ಷ್ಮಿ, ಸಂಪನ್ಮೂಲ ವ್ಯಕ್ತಿ ಕು.ಅಂಕಿತ, ದುರ್ಗಾ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು, ಸಂಜೀವಿನಿ ಒಕ್ಕೂಟದ ಸಂಪನ್ಮೂಲ ವ್ಯಕ್ತಿ ಸರಿತಾ ಹಾಗೂ ಭಾರತಿ ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ನಿಮಿತಾ ಕೆ ಎಸ್ ವಂದಿಸಿದರು. ಎಂಬಿಕೆ ಅನುರಾಧ ಪ್ರಭು ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.