ಇರ್ದೆ ಪಳ್ಳಿತ್ತಡ್ಕ ಮಖಾಂ ಉರೂಸ್ ಕಮಿಟಿ ಅಧ್ಯಕ್ಷ: ಅಲಿ ಶಾಲಾಬಳಿ, ಪ್ರ.ಕಾರ್ಯದರ್ಶಿ: ಅಶ್ರಫ್ ಕುಕ್ಕುಪುಣಿ

ಪುತ್ತೂರು: ಇತಿಹಾಸ ಪ್ರಸಿದ್ದ, ಕರಾವಳಿಯ ಸೌಹಾರ್ಧತಾ ಕೇಂದ್ರ ಎಂದೇ ಪ್ರಸಿದ್ದಿ ಪಡೆದ ಇರ್ದೆ ಪಳ್ಳಿತ್ತಡ್ಕ ಮಖಾಂ ಉರೂಸ್ ಹಾಗೂ ಧಾರ್ಮಿಕ ಮತಪ್ರವಚನ 2023ರ ಫೆಬ್ರವರಿ 19ರಿಂದ 25 ರ ತನಕ ಅಲ್ಹಾಜ್ ಅಸ್ಸಯ್ಯದ್ ಆಟ್ಟಕ್ಕೋಯ ತಂಙಳ್ ಕುಂಬೋಲ್‌ರವರ ಧ್ಯಕ್ಷತೆಯಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಉರೂಸ್ ಕಮಿಟಿ ರಚನೆ ಜಮಾಅತ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಕುಂಞ ಹಾಜಿ ಕೊರಿಂಗಿಲರವರ ಅಧ್ಯಕ್ಷತೆಯಲ್ಲಿ ಕೊರಿಂಗಿಲ ಜುಮಾ ಮಸೀದಿಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಅಲಿ ಶಾಲಾಬಳಿ ಬೆಟ್ಟಂಪಾಡಿ, ಉಪಾಧ್ಯಕ್ಷರಾಗಿ ಹಮೀದ್ ಕೊಮ್ಮೆಮ್ಮಾರ್, ಹಮೀದ್ ಸಾಲ್ಮರ, ಮೂಸೆ ಕುಂಞಿ ಕೀಲಂಪಾಡಿ ಕಾರ್ಯದರ್ಶಿಯಾಗಿ ಅಶ್ರಫ್ ಕುಕ್ಕುಪುಣಿ, ಜೊತೆ ಕಾರ್ಯದರ್ಶಿಗಳಾಗಿ ಲತೀಫ್ ಗುಂಡ್ಯಡ್ಕ, ಅಝೀಝ್ ತೊಟದಮೂಲೆ, ನೌಫಲ್ ಬೆಟ್ಟಂಪಾಡಿ, ಸಲೀಂ ಅಂಕತ್ತಲ, ಸಂಘಟನಾ ಕಾರ್ಯದರ್ಶಿಯಾಗಿ ಅನ್ವರ್ ಕೊರಿಂಗಿಲ, ಪತ್ರಿಕಾ ಪ್ರತಿನಿಧಿಯಾಗಿ ಶಫೀಕ್ ಅಂಕತ್ತಳ, ಶಬೀಬ್ ಶಾ ಟಿ.ಎಂ, ಜಹ್ವಾಜ್ ಕೊರಿಂಗಿಲರವರನ್ನು ಆಯ್ಕೆ ಮಾಡಲಾಯಿತು. ಸಮಿತಿಗೆ ೭೯ ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ಕುಂಞಿ ಹಾಜಿ ಕೊರಿಂಗಿಲ, ಇಸ್ಮಾಯಿಲ್ ಹಾಜಿ ಎಂಪೆಕ್ಕಲ್, ಆಲಿಕುಂಞ ಹಾಜಿ ಕೊರಿಂಗಿಲ, ಕಾಸಿಂ ಕೇಕನಾಜೆ, ಮುಹಮ್ಮದ್ ಹಾಜಿ ಶಾಲಬಳಿ, ಶಾಹುಲ್ ಹಮೀದ್ ಕೊರಿಂಗಿಲ,ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಅಬ್ದುಲ್ಲಾ ಮೌಲವಿ, ಅಬ್ದುಲ್ಲ ಹಾಜಿ ಅನಡ್ಕ, ಇಬ್ರಾಹಿಂ ನಿಡ್ಪಳ್ಳಿ, ಶಾಹುಲ್ ಹಮೀದ್ ಮುಸ್ಲಿಯಾರ್, ಮೂಸ ಮದನಿ ಬೀಂತಡ್ಕ, ಅಬ್ದುಲ್ಲ ಹಾಜಿ ಕೊರಿಂಗಿಲ, ಅಬೂಬಕ್ಕರ್ ಖಿಒ, ಮೂಸೆಕುಂಞಿ ಬೆಟ್ಟಂಪಾಡಿ, ಅಶ್ರಫ್ ಕೊರಿಂಗಿಲ ಅಬ್ದುಲ್ಲ ಕೂರಿಬಲೆ ಇವರನ್ನು ಆಯ್ಕೆ ಮಾಡಲಾಯಿತು. ಬಹು ಮೂಸ ಮದನಿ ಉಸ್ತಾದರು ದುಆ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.