ವಿಟ್ಲ: ಮನೆಪರಿಸರದಲ್ಲಿ ಕಾಡೆಮ್ಮೆ ಮರಿ ಪತ್ತೆ

0

ವಿಟ್ಲ: ವ್ಯಕ್ತಿಯೋರ್ವರ ಮನೆ ಪರಿಸರದಲ್ಲಿ ಕಾಡೆಮ್ಮೆಯ ಮರಿಯೊಂದು ಪತ್ತೆಯಾದ ಘಟನೆ ವಿಟ್ಲ ಕಸಬಾ ಗ್ರಾಮದ ನೆಕ್ಕಿಲಾರು ಎಂಬಲ್ಲಿ ನಡೆದಿದೆ. ವಿಟ್ಲ ಕಸಬಾ ಗ್ರಾಮದ ನೆಕ್ಕಿಲಾರು ನಿವಾಸಿ ಲೋಕಯ್ಯ ಎಂಬವರ ಮನೆ ಪರಿಸರದಲ್ಲಿ ಕಾಡೆಮ್ಮೆಯ (ಕಾಟಿ) ಮರಿ ಪತ್ತೆಯಾಗಿದೆ. ಸ್ಥಳದಲ್ಲಿ ಹಲವಾರು ಮಂದಿ ನೆರೆದಿದ್ದು ಬಳಿಕ ಮನೆಯವರು ಸ್ಥಳೀಯ ಅರಣ್ಯ ಅಽಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೆಲಿಂಜ ಮತ್ತು ಉಕ್ಕುಡದ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕಾಡೆಮ್ಮೆಯ ಮರಿಯನ್ನು ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here