ಬೊಳುವಾರಿನಲ್ಲಿ ಡಿಸೈನ್ ಮಾಸ್ಟರ‍್ಸ್ ಇಂಟೀರಿಯರ‍್ಸ್ ಶುಭಾರಂಭ

ಪುತ್ತೂರು:ಮನೆ,ಕಚೇರಿಗಳ ಮತ್ತು ಕಟ್ಟಡಗಳ ಒಳ ವಿನ್ಯಾಸಗಳನ್ನು ಮಾಡುವ ಡಿಸೈನ್ ಮಾಸ್ಟರ‍್ಸ್ ಇಂಟೀರಿಯರ‍್ಸ್ ನ.21ರಂದು ಬೊಳುವಾರಿನ ವಿಶ್ವಕರ್ಮ ಸಭಾಭವನದ ಬಳಿಯ ಪಡ್ಡಂಬೈಲು ಫ್ಲಾಝಾದಲ್ಲಿ ಶುಭಾರಂಭಗೊಂಡಿತು. ಕೇರಳ, ಮಂಗಳೂರು, ಉಡುಪಿ, ಮಣಿಪಾಲ, ಕುಂದಾಪುರ, ಬೆಂಗಳೂರು ಮತ್ತಿತರ ಕಡೆಗಳಲ್ಲಿ ಇಂಟೀರಿಯರ್ ಸೇವೆ ನೀಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಪುತ್ತೂರಿನ ಯುವಕರಾದ ಇರ್ಷಾದ್ ಮತ್ತು ನಾಫಿ ಅಹಮ್ಮದ್ ರವರು ಪುತ್ತೂರಿನಲ್ಲಿ ನೂತನವಾಗಿ ಸ್ಥಾಪಿಸಿದ ಡಿಸೈನ್ ಮಾಸ್ಟರ‍್ಸ್ ಇಂಟೀರಿಯರ್ ಕಚೇರಿಯನ್ನು ಮೇಘಾ ಸಂಸ್ಥೆಯ ಮಾಲಕ ಆಸ್ಕರ್ ಆನಂದ್ ಉದ್ಘಾಟಿಸಿದರು. ಸಂಸ್ಥೆಯು ಎಲ್ಲರ ಮನಮೆಚ್ಚುವ ಕೇಂದ್ರವಾಗಲಿ. ಬೆಳೆಯುತ್ತಿರುವ ಪುತ್ತೂರಿಗೆ ಇದೊಂದು ಮುಕುಟಮಣಿಯಾಗಿದೆ ಎಂದು ಹೇಳಿ ಸಂಸ್ಥೆಯ ಪ್ರಗತಿಗೆ ಅವರು ಶುಭಹಾರೈಸಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಮಾಜಿ ಅಧ್ಯಕ್ಷ ಯು.ಅಬ್ದುಲ್ ಹಾಜಿ ಸಾಲ್ಮರ ಅವರು ಮಾತನಾಡಿ ಈ ಸಂಸ್ಥೆ ಪ್ರತಿಯೊಬ್ಬರ ಸಹಕಾರದಿಂದ ಹೆಮ್ಮರವಾಗಿ ಬೆಳೆಯಲಿ ಎಂದರು.ಸಾಲ್ಮರ ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯು.ಮುಹಮ್ಮದ್ ಹಾಜಿ ಪಡೀಲ್ ಅವರು ಮಾತನಾಡಿ ಇಂತಹ ಸಂಸ್ಥೆಗಳ ಮೂಲಕ ಜನ ತೃಪ್ತಿಗೊಳ್ಳಲಿ ಮತ್ತು ಇದು ಉತ್ತಮ ಕೇಂದ್ರವಾಗಿ ಬೆಳೆಯಲಿ ಎಂದು ಹೇಳಿದರು. ನಗರಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ ಅವರು ಮಾತನಾಡಿ ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಸಂಸ್ಥೆ ಪೂರಕವಾಗಲಿ. ಮನೆಯ ವಿನ್ಯಾಸ ಹಾಗು ಹೊಸ ಹೊಸ ಅವಿಷ್ಕಾರಗಳು ಈ ಸಂಸ್ಥೆಯಿಂದ ಜನರಿಗೆ ಸಿಗುವಂತಾಗಲಿ ಎಂದು ಹೇಳಿ ಶುಭಹಾರೈಸಿದರು. ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ದರ್ಬೆ ಅವರು ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಭಾರತ್ ಇಂಟೀರಿಯರ್ ಡೆಕೋರ್ ಮಂಗಳೂರು ಇದರ ಮಾಲಕ ಮುಹಮ್ಮದ್ ಅಯಾಝ್,ಕಲ್ಲಡ್ಕ ಹಮ್ಮಬ್ಬ ಹಾಜಿ, ಹನೀಫ್ ಪುತ್ತೂರು, ಕಟ್ಟಡದ ಮಾಲಕ ನ್ಯಾಯವಾದಿ ಸುರೇಶ್ ರೈ ಪಡ್ಡಂಬೈಲು, ಜಿ.ರ‍್ಯಾಕ್ಸ್‌ನ ಮಾಲಕರಾದ ನೌಶದಾಲಿ ಮತ್ತು ಮುಸ್ತಾಕ್ ಅಹಮ್ಮದ್, ಯು.ಅಬ್ದುಲ್ ರಜಾಕ್ ಸಾಲ್ಮರ, ರೆಡ್ ಪ್ಲೈವುಡ್ಸ್‌ನ ಜುನೈದ್, ಅಬ್ದುಲ್ ರಜಾಕ್ ಆರ್.ಪಿ, ಆಫಿಯೂನ್ ಪ್ಲೈವುಡ್ ಮೆನೇಜರ್ ಮುಹಮ್ಮದ್ ಆಶ್ಪಕ್, ಪುತ್ತೂರು ಏರ್ ವಾಯ್ಸ್ ಮಾಲಕ ಜಮಾಲ್, ಯೂಸುಫ್ ಬನ್ನೂರು, ಶಾಕೀರ್ ಹಜಾಜ್, ಅಶ್ರಫ್ ಪರ್ಲಡ್ಕ, ಮುಸ್ತಾಫ ಬೋಳಂತೂರು, ಅನ್ಸಾರ್, ಸಮದ್, ಅನ್ಸಾಫ್ ಸಾಲ್ಮರ, ಅಹಮ್ಮದ್, ನವಾಫ್ ಸಾಲ್ಮರ, ಯೂಸುಫ್ ಸಹಾದ್ ದರ್ಬೆ, ಸಿಯಾನ್ ದರ್ಬೆ, ಸವಾದಲಿ ಪುತ್ತೂರು, ಜವಾಝ್ ಕಲ್ಲಡ್ಕ, ಝಕರಿಯ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.‌ ಸಂಸ್ಥೆಯ ಮಾಲಕ ಮಹಮ್ಮದ್ ಇರ್ಷಾದ್ ಮತ್ತು ನಾಫಿ ಅಹಮ್ಮದ್ ಅತಿಥಿಗಳನ್ನು ಸ್ವಾಗತಿಸಿದರು. ಇಮ್ತಿಯಾಝ್ ಪಾರ್ಲೆ ಕಾರ್ಯಕ್ರಮ ನಿರೂಪಿಸಿದರು. ಅಹ್ಮದ್ ನವಾಫ್ ಸಾಲ್ಮರ ವಂದಿಸಿದರು.‌

ಉದ್ಘಾಟನೆ ಪ್ರಯುಕ್ತ ವಿಶೇಷ ಆಫರ್: ರೂ. ಒಂದು ಲಕ್ಷದ ಮೇಲೆ ಮೊಡ್ಯುಲರ್ ಕಿಚನ್ ಆರ್ಡರ್ ಮಾಡಿದಲ್ಲಿ ಚಿಮ್ನಿ ಉಚಿತವಾಗಿ ನೀಡಲಾಗುವುದು. ಈ ವಿಶೇಷ ಕೊಡುಗೆ ಡಿ.31ರವರೆಗೆ ಮಾತ್ರ ಲಭ್ಯವಿದೆ. ಗ್ರಾಹಕರು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.