ನ.24: ಈಶ್ವರಮಂಗಲದಲ್ಲಿ ಅಬ್ಕೋ ಗೋಲ್ಡ್ ಚಿನ್ನದ ಮಳಿಗೆ ಶುಭಾರಂಭ

0

ಉದ್ಘಾಟನಾ ಸಮಾರಂಭದ ಪ್ರಯುಕ್ತ ವಿವಿಧ ಕೊಡುಗೆಗಳ ಘೋಷಣೆ

ಪುತ್ತೂರು: ಈಶ್ವರಮಂಗಲ ಪೇಟೆಯಲ್ಲಿರುವ ಟಿ.ಎ ಕಾಂಪ್ಲೆಕ್ಸ್‌ನಲ್ಲಿ ಅಬ್ಕೋ ಗೋಲ್ಡ್ & ಡೈಮಂಡ್ಸ್ ಮಳಿಗೆ ನ.24ರಂದು ಬೆಳಿಗ್ಗೆ ಗಂಟೆ 10-30ಕ್ಕೆ ಶುಭಾರಂಭಗೊಳ್ಳಲಿದೆ.

ಅಸ್ಸಯ್ಯದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಹಾಗೂ ಅಸ್ಸಯ್ಯದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂ ಆಶೀರ್ವಚನ ನೀಡಲಿದ್ದು ಪುತ್ತೂರು ಉಪವಿಭಾಗ ಡಿವೈಎಸ್‌ಪಿ ಡಾ.ವೀರಯ್ಯ ಹಿರೇಮಠ್ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿದ್ದು ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಮುಈನುದ್ದೀನ್ ಖಾದಿರಿ ಬೆಂಗಳೂರು ಭಾಗವಹಿಸಲಿದ್ದು ನಅತೇ ಶರೀಫ್ ಆಲಾಪನೆ ಮಾಡಲಿದ್ದಾರೆ. ಹಾಸ್ಯ ನಟ ಅರವಿಂದ ಬೋಳಾರ್ ಅವರೂ ಭಾಗವಹಿಸಲಿದ್ದಾರೆ.

ಅತಿಥಿಗಳಾಗಿ ಹನುಮಗಿರಿ ಕ್ಷೇತ್ರದ ಮಹಾಪೋಷಕರಾದ ಜಿ.ಕೆ ಮಹಬಲೇಶ್ವರ ಭಟ್, ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ನೆ.ಮುಡ್ನೂರು ಗ್ರಾ.ಪಂ ಪಿಡಿಓ ಸಂದೇಶ್ ಕೆ.ಎನ್, ಕಾವು ಬುಶ್ರಾ ವಿದ್ಯಾಸಂಸ್ಥೆಯ ಸಂಚಾಲಕ ಬುಶ್ರಾ ಅಬ್ದುಲ್ ಅಝೀಝ್ ಗಜಾನನ ವಿದ್ಯಾಸಂಸ್ಥೆಯ ಸಂಚಾಲಕ ಶಿವರಾಮ ಪಿ, ಗಜಾನನ ವಿದ್ಯಾಸಂಸ್ಥೆಯ ಪ್ರಾಚಾರ್ಯ ಕೆ ಶ್ಯಾಮಣ್ಣ, ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಸಮಿತಿ ವ್ಯವಸ್ಥಾಪಕ ವಿಕ್ರಂ ರೈ ಸಾಂತ್ಯ, ನೆ.ಮುಡ್ನೂರು ಗ್ರಾ.ಪಂ ಸದಸ್ಯರಾದ ಪ್ರದೀಪ್ ರೈ ಕೆ.ಬಿ, ಸಂಶುದ್ದೀನ್ ಪಿ, ಶ್ರೀರಾಮ್ ಪಕ್ಕಳ, ಇಬ್ರಾಹಿಂ ಪಳ್ಳತ್ತೂರು, ರಾಮ ಮೇನಾಲ, ದೇಲಂಪಾಡಿ ಐಯುಎಂಎಲ್ ಅಧ್ಯಕ್ಷ ಅಶ್ರಫ್ ಚೆಂಡಮಾಲೆ, ಪುತ್ತೂರು ತಾ.ಪಂ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ಬಡಗನ್ನೂರು, ದೇಲಂಪಾಡಿ ಗ್ರಾ.ಪಂ ಅಧ್ಯಕ್ಷ ಮುಸ್ತಫಾ ಹಾಜಿ, ಜಿ.ಪಂ ಮಾಜಿ ಸದಸ್ಯರಾದ ಅನಿತಾ ಹೇಮನಾಥ ಶೆಟ್ಟಿ, ರವಿಕಿರಣ್ ಶೆಟ್ಟಿ ಬೆದ್ರಾಡಿ, ಹಿರಾ ಖಾದರ್ ಹಾಜಿ, ಟಿ.ಎ ಅಬ್ದುಲ್ ಖಾದರ್ ಹಾಜಿ, ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಶಿವ ಎಂಟರ್‌ಪ್ರೈಸಸ್‌ನ ವಿಠಲ ಶೆಟ್ಟಿ ಎಸ್, ಹಿರಿಯ ವೈದ್ಯಾಧಿಕಾರಿಗಳಾದ ಡಾ.ಶ್ರೀಕುಮಾರ್, ಡಾ.ಉದನೇಶ್ವರ ಭಟ್, ನ್ಯಾಯವಾದಿ ಮೊಹಮ್ಮದ್ ಫವಾಝ್, ಪೂಪಿ ಸಾಫ್ಟ್ ಡ್ರಿಂಕ್ಸ್‌ನ ಮಾಲಕ ಅಬೂಬಕ್ಕರ್ ಎನ್.ಎಸ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅಬ್ಕೋ ಗೋಲ್ಡ್ ಚಿನ್ನದ ಮಳಿಗೆಯ ಪಾಲುದಾರರು ತಿಳಿಸಿದ್ದಾರೆ.

ಉದ್ಘಾಟನೆ ಪ್ರಯುಕ್ತ ಭರ್ಜರಿ ಕೊಡುಗೆ:
ಅಬ್ಕೋ ಗೋಲ್ಡ್ ಮಳಿಗೆ ಶುಭಾರಂಭದ ಪ್ರಯುಕ್ತ ಕೊಡುಗೆಗಳನ್ನು ಘೋಷಿಸಿದ್ದು ಪ್ರತೀ ಖರೀದಿಗೂ ಉಚಿತ ಕೂಪನ್ ದೊರೆಯಲಿದ್ದು ಬಂಪರ್ ಡ್ರಾ ಮೂಲಕ ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಹಾಗೂ 32″ ಎಲ್‌ಇಡಿ ಟಿವಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ನ.24ರಿಂದ ಡಿ.5ರ ವರೆಗೆ ಉಚಿತವಾಗಿ ಕಿವಿ ಹಾಗೂ ಮೂಗು ಚುಚ್ಚಿ ಕೊಡಲಾಗುತ್ತದೆ.

LEAVE A REPLY

Please enter your comment!
Please enter your name here