ಸುಳ್ಯಪದವು:ಪುನರ್ ಪ್ರತಿಷ್ಠೆಯ ಪೂರ್ವಭಾವಿ ಸಭೆ

ಸುಳ್ಯಪದವು: ಶಬರಿಮಲೆ ಅಯ್ಯಪ್ಪ ತುಳಸಿಮಾಲೆ ಧರಿಸುವುದು ವಿಶೇಷ.ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತುಳಸಿ ಗಿಡ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇತರ ಗಿಡಗಳನ್ನು,ಹೂವಿನ ಗಿಡ ಗಳನ್ನು ಬೆಳೆಸುವ ಪ್ರಕ್ರಿಯೆಗಳು ನಡೆಯಬೇಕು.ಪ್ರತಿ ಮನೆ ಮನೆಯಿಂದ ಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹೂ,ತುಳಸಿ ಸೇರಿದಂತೆ ಭಕ್ತಿಯ ಪುಷ್ಪದ ಸಮರ್ಪಣೆಯಾದಾಗ ಅಯ್ಯಪ್ಪ ಸ್ವಾಮಿ ಸಾನಿಧ್ಯ ವೃದ್ಧಿಸುತ್ತದೆ ಎಂದು ಮಾಣಿಲ ಶ್ರೀ ಧಾಮದ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ ಹೇಳಿದರು.


ಅವರು ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯ ವೀಕ್ಷಣೆ ಮಾಡಿ ಪುನರ್ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಭಜನೆಯ ಪಾವಿತ್ರ್ಯತೆ ಉಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಖ್ಯ.ಹಿಂದೂ ಸಮಾಜದ ಆಚರಣೆಗಳು,ಆರಾಧನೆಗಳ ಬಗ್ಗೆ ಯೋಚನೆ ಮಾಡುವ ಅವಶ್ಯಕತೆ ಇದೆ.ಪ್ರಕೃತಿ ವೈಪರೀತ್ಯಗಳು,ಮನೆಯ ವಾತಾವರಣದಲ್ಲಿ ಹಲವು ಗೊಂದಲವನ್ನು ಎದುರಿಸುತ್ತಿದ್ದೇವೆ.ಇದಕ್ಕೆ ಹಿರಿಯರ ಮಾರ್ಗದರ್ಶನದೊಂದಿಗೆ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕಾಗಿದೆ ಎಂದ ಅವರು, ಭಜನಾ ಮಂದಿರದ ಪಾವಿತ್ರ್ಯತೆ ಉಳಿಸುವ ನಿಟ್ಟಿನಲ್ಲಿ ಪೂರಕ ಕ್ರಮಕೈಗೊಳ್ಳಬೇಕು. ಭಕ್ತಿಯಿಂದ ಸೇರುವಾಗ ಎಲ್ಲರೂ ಒಂದೇ ರೀತಿಯಲ್ಲಿ ವ್ಯವಹರಿಸುವ ಅವಶ್ಯಕತೆ ಇದೆ.ಮುಂದೆ ನಡೆಯವ ಪ್ರತಿಷ್ಠಾ ಸಂದರ್ಭದಲ್ಲಿ ಇಲ್ಲಿನ ಪಾವಿತ್ರ್ಯತೆ ಉಳಿಸಲು ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಎಂದರು.


ಪುನರ್ ಪ್ರತಿಷ್ಠಾ ಮಹೋತ್ಸವದ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಉದ್ಯಮಿ ಜಯಂತ್‌ನಡುಬೈಲು ಮಾತನಾಡಿ ಮಂದಿರದಲ್ಲಿ ನಡೆದ ಕೆಲವು ಸಭೆಯಲ್ಲಿ ಭಾಗವಹಿಸಿದ್ದೇನೆ. ಇಲ್ಲಿನ ಯುವಶಕ್ತಿ ಸಂಘವು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ.ಇದರ ಜೊತೆ ಬೇರೆ ಬೇರೆ ಸಂಘ ಸಂಸ್ಥೆಗಳು ಕೈ ಜೋಡಿಸುವುದರಿಂದ ಕೆಲಸಕಾರ್ಯಗಳು ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದರು.

ಒಂದು ತಿಂಗಳಲ್ಲಿ ಭವ್ಯ ಮಂದಿರದ ಪುನರ್ ಪ್ರತಿಷ್ಠೆ ಮಹೋತ್ಸವ ನಡೆಯಲಿದೆ.ಇದರ ಸನಿಹದಲ್ಲಿ ಸಭಾಭವನ ನಿರ್ಮಾಣವಾಗಲಿದ್ದು ಇದು ಜನರಿಗೆ ಮತ್ತಷ್ಟು ಸಹಕಾರಿಯಾಗಲಿದೆ. ನಿಮ್ಮೆಲ್ಲರ ಪ್ರೀತಿ ,ಸಹಕಾರದೊಂದಿಗೆ ಡಿ.27ರಿಂದ ಐದು ದಿನ ನಡೆಯುವ ಪುನರ್ ಪ್ರತಿಷ್ಠಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಎಂದು ಅವರು ಹೇಳಿದರು.


ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಐ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಕಾರ್ಯಕ್ಕೆ ದಾನಿಗಳು ಧನ ಸಹಾಯ ನೀಡಿದರು.ಪ್ರತಿಷ್ಠಾ ಕಾರ್ಯಕ್ಕೆ ಸಮಿತಿ ಮತ್ತು ಉಪಸಮಿತಿಗಳನ್ನು ರಚಿಸಲಾಯಿತು. ಹಿರಿಯರಾದ ಪ್ರಭಾಕರ ನಾಯಕ್ ಇಂದಾಜೆ,ಬೀರಮೂಲೆ ರಾಮ ಭಟ್,ಮಂದಿರದ ಚಿನ್ನಪ್ಪ ಗುರುಸ್ವಾಮಿ ಉಪಸ್ಥಿತರಿದ್ದರು.ಪುನರ್ ಪ್ರತಿಷ್ಠಾ ಮಹೋತ್ಸವದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಕನ್ನಡ್ಕ ಪ್ರಸ್ತಾವನೆಗೈದು ಸ್ವಾಗತಿಸಿ,ಕಾರ್ಯಾಧ್ಯಕ್ಷ ಡಾ.ಮೋಹನದಾಸ್ ರೈ ವಂದಿಸಿದರು.ಕಾರ್ಯದರ್ಶಿ ರಾಜೇಶ್ ಎಂ ಕಾರ್ಯಕ್ರಮ ನಿರ್ವಹಿಸಿದರು. 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.