ಗ್ರಂಥಾಲಯ ಸಪ್ತಾಹ; ಶಾಂತಿನಗರ ಶಾಲೆಗೆ ಹಲವು ಪ್ರಶಸ್ತಿ

ನೆಲ್ಯಾಡಿ: ಕಡಬ ತಾಲೂಕು ಗೋಳಿತ್ತೊಟ್ಟು ಗ್ರಾಮ ಪಂಚಾಯತ್‌ನ 2022-23ನೇ ಸಾಲಿನ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನ.23ರಂದು ನಡೆದ ವಿವಿಧ ಸ್ಪರ್ಧೆಗಳಲ್ಲಿ ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಒಟ್ಟು 11 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಿಧಿ-ಪ್ರಥಮ, ಧೃತಿ-ದ್ವಿತೀಯ, ಶಬ್ಧಕೋಠಿ-ಹೊಸ ಪದಗಳನ್ನು ಹುಡುಕುವ ಸ್ಪರ್ಧೆಯಲ್ಲಿ ಪ್ರಾಪ್ತಿ- ಪ್ರಥಮ, ಧೃತಿ- ದ್ವಿತೀಯ, ಕನ್ನಡ ಭಾಷಣ ಸ್ಪರ್ಧೆಯಲ್ಲಿ ನಿಧಿ ಪ್ರಥಮ ಸ್ಥಾನ ಪಡೆದುಕೊಂಡರು.

ಹಿರಿಯ ಪ್ರಾಥಮಿಕ ವಿಭಾಗದ ರಸಪ್ರಶ್ನೆಯಲ್ಲಿ ಧನುಷ್-ಪ್ರಥಮ, ತನುಷ್-ದ್ವಿತೀಯ, ಮನೀಶ್-ತೃತೀಯ, ಶಬ್ದಕೋಠಿ ಹೊಸ ಪದಗಳನ್ನು ಹುಡುಕುವ ಸ್ಪರ್ಧೆಯಲ್ಲಿ ಝಾಹೀಮಾ ಪ್ರಥಮ, ಭಾಷಣ ಸ್ಪರ್ಧೆಯಲ್ಲಿ ಪುನೀತ್-ದ್ವಿತೀಯ, ಚೈತ್ರಾ-ತೃತೀಯ ಹಾಗೂ ಚೈತನ್ಯ ಮತ್ತು ಮಾನ್ವಿ ಸಮಾಧಾನಕರ ಬಹುಮಾನ ಪಡೆದುಕೊಂಡರು. ಶಾಲಾ ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.