ನ. 26: ಲಯನ್ಸ್ ಸಭಾಭವನದಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ

ಪುತ್ತೂರು: ಇಂಡಿಯಾನ ಆಸ್ಪತ್ರೆ ಮಂಗಳೂರು, ಲಯನ್ಸ್ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಇಲೈಟ್, ರೋಟರಿ ಪುತ್ತೂರು ಸೆಂಟ್ರಲ್, ರೋಟರಿ ಪುತ್ತೂರು ಸ್ವರ್ಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು ಹಾಗೂ ಟೀಮ್ ಒಳಿತು ಮಾಡು ಮನುಷ ಸಂಯುಕ್ತ ಆಶ್ರಯದಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ನ.26ರಂದು ಬೆಳಗ್ಗೆ 9.30ರಿಂದ ಅಪರಾಹ್ನ 2ಗಂಟೆಯವರೆಗೆ ಪುತ್ತೂರಿನ ಬಿ.ಇ.ಒ ಕಚೇರಿ ರಸ್ತೆಯಲ್ಲಿರುವ ಲಯನ್ಸ್ ಸಭಾಂಗಣದಲ್ಲಿ ಜರಗಲಿದೆ.

ಇಂಡಿಯಾನ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಕ್ಯಾನ್ಸರ್ ರೋಗ ತಜ್ಞ ಡಾ. ರಮಾನಾಥ ಶೆಣೈ ಮತ್ತು ಶಸಚಿಕಿತ್ಸಾ ತಜ್ಞ ಡಾ. ಅಜಯ್ ಕುಮಾರ್ ತಪಾಸಣೆ ನಡೆಸಲಿದ್ದಾರೆ. ದೇಹದಲ್ಲಿ ಮಚ್ಚೆಗಳು, ದೇಹದೊಳಗೆ ಮಾಂಸಗಡ್ಡೆಗಳ ಬೆಳವಣಿಗೆ, ಆಗಾಗ ಆರೋಗ್ಯದಲ್ಲಿ ಏರುಪೇರು, ಸ್ತನಗಳಲ್ಲಿ ಗಡ್ಡೆ, ಗುಣವಾಗದ ಸ್ತ್ರೀಯರ ಸಮಸ್ಯೆಗಳು ಇತ್ಯಾದಿ ತೊಂದರೆಗಳಿರುವವರು ಉಚಿತವಾಗಿ ತಪಾಸಣೆ ಮಾಡಿಸಿಕೊಳ್ಳಲು ಅವಕಾಶವಿದ್ದು ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡಕೊಳ್ಳಬೇಕೆಂದು ರೆಡ್ ಕ್ರಾಸ್ ಕಾರ್ಯಕ್ರಮ ಉಪಸಮಿತಿಯ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಪ್ರಕಟಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.