ನ.27: ಪುತ್ತೂರು ತಾಲೂಕು ತುಳು ಸಮ್ಮೇಳನದ ಪೂರ್ವಭಾವಿ ಸಭೆ

ಪುತ್ತೂರು: ತುಳುಕೂಟೊ ಪುತ್ತೂರು ಇದರ ವತಿಯಿಂದ ದಶಂಬರ ಕೊನೆಯ ವಾರದಲ್ಲಿ ಪುತ್ತೂರು ತಾಲೂಕು ತುಳು ಮೇಳೊ (ತುಳು ಸಮ್ಮೇಳನ) ಆಯೋಜಿಸಲು ಉದ್ದೇಶಿಸಲಾಗಿದ್ದು ಅದರ ಪೂರ್ವಭಾವಿ ಸಭೆ ನ.27ರಂದು ಬೆಳಗ್ಗೆ 10ರಿಂದ ಬಂಟರ ಭವನದಲ್ಲಿ ಜರಗಲಿದೆ.

ಕಾವು ಹೇಮನಾಥ ಶೆಟ್ಟಿ, ಸವಣೂರು ಸೀತಾರಾಮ ರೈ, ಅಶೋಕ್ ರೈ ಕೋಡಿಂಬಾಡಿ, ರೆ| ವಿಜಯ ಹಾರ್ವಿನ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸಲಹೆ ಸೂಚನೆ ನೀಡಲಿದ್ದಾರೆ. ಸಮ್ಮೇಳನದ ತಯಾರಿಗೆ ವಿವಿಧ ಸಮಿತಿಗಳನ್ನು ಆಯ್ಕೆ ಮಾಡಲಿದ್ದು ಜಾತಿ, ಮತ ಭೇದವಿಲ್ಲದೆ ಎಲ್ಲಾ ತುಳುವರು ಮತ್ತು ತುಳು ಅಭಿಮಾನಿಗಳು ಹಾಜರಾಗಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ತುಳುಕೂಟೊ ಪುತ್ತೂರು ಇದರ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಮತ್ತು ಕಾರ್ಯದರ್ಶಿ ರಾಜೇಶ್ ಬೆಜ್ಜಂಗಳ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.