ಆಲಂಕಾರು ವಲಯ ಯುವ ಬಂಟರ ಸಂಘದ ಅಧ್ಯಕ್ಷರಾಗಿ ಸುಶಾನ್ ಎಸ್ ರೈ ನೆಲ್ಯೂಟ್ಟು ಕಾರ್ಯದರ್ಶಿ ಯಾಗಿ ಕವನ್ ರೈ ಮನವಳಿಕೆ

ಆಲಂಕಾರು: ಆಲಂಕಾರು ವಲಯ ಯುವ ಬಂಟರ ಸಂಘದ ಅಧ್ಯಕ್ಷರಾಗಿ ಸುಶಾನ್ ರೈ ನೆಲ್ಯೂಟ್ಟು,ಕಾರ್ಯದರ್ಶಿ ಯಾಗಿ ಕವನ್ ರೈ ಮನವಳಿಕೆ ಕೋಶಾಧಿಕಾರಿಯಾಗಿ ಕೃತನ್ ರೈ ಬಲೆಂಪೋಡಿ,ಉಪಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಬರೆಂಬಾಡಿ,ರವಿರಾಜ್ ರೈ ಗುತ್ತುಪಾಲು,ಧನ್ಯ ಪಿ ರೈ ಯವರನ್ನು ಜೊತೆ ಕಾರ್ಯದರ್ಶಿ ಯಾಗಿ ಆಯ್ಕೆಯಾದರು.

ನ.20 ರಂದು ಆಲಂಕಾರು ದುರ್ಗಾಂಬಾ ಕ್ರೀಡಾಂಗಣದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ, ಆಲಂಕಾರು ವಲಯ ಬಂಟರ ಕ್ರೀಡಾಕೂಟ ಜರುಗಿತು. ಪರುಷರಿಗೆ ಹಗ್ಗಜಗ್ಗಾಟ,ಕ್ರಿಕೇಟ್,ವಾಲಿಬಾಲ್,ಮಹಿಳೆಯರಿಗೆ ಹಗ್ಗಜಗ್ಗಾಟ,ತ್ರೋಬಾಲ್,ಸಂಗೀತ ಕುರ್ಚಿ ನಡೆಯಿತು .

ಆ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷ ಸೇಸಪ್ಪ ರೈ ಕೆ, ಬಂಟರಯಾನೆ ನಾಡವರ ಮಾತೃಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ದಯಾನಂದ ರೈ ಮನವಳಿಕೆ ಗುತ್ತು,ಆಲಂಕಾರು ವಲಯ ಬಂಟರ ಸಂಘದ ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ, ಉಪಾಧ್ಯಕ್ಷ ರಾಮಮೋಹನ ರೈ ಸುರುಳಿ, ಪ್ರಭಾರಘನಾಥ ಚೌಟ, ಕೋಶಾಧಿಕಾರಿ ಸಂತೋಷ ರೈ ಆರುವಾರ, ಜೊತೆ ಕಾರ್ಯದರ್ಶಿ ಚೆನ್ನ ಕೇಶವ ರೈ ಗುತ್ತುಪಾಲು,ಪುತ್ತೂರು ತಾಲೂಕ್ಕು ಬಂಟರ ಸಂಘದ ನಿರ್ದೇಶಕ ರಾಧಾಕೃಷ್ಣ ರೈ ಪರಾರಿಗುತ್ತು, ಸುಭಾಶ್ ಶೆಟ್ಟಿ ಆರುವಾರ ,ಆಲಂಕಾರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ,ಪುತ್ತೂರು ತಾಲೂಕು ಯುವ ಬಂಟರ ಸಂಘದ ಉಪಾಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ ಹಾಗು ಪ್ರಮುಖರಾದ ಲೋಕನಾಥ ರೈ ಕೇಲ್ಕ ರಾಮಕುಂಜ,ಸುದೀನ್ ಎಸ್ ರೈ ನೆಲ್ಯೂಟ್ಟು ಹಾಗು ಇನ್ನಿತರ ಪ್ರಮುಖರ ಸಮ್ಮುಖದಲ್ಲಿ, ಆಲಂಕಾರು ವಲಯ ಯುವ ಬಂಟರ ಸಂಘದ ಪದಾದಿಕಾರಿಗಳನ್ನು ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.