ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ 2022 ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಪಡೆದ ವಿಟ್ಲದ ಖುಷಿ ಸಾಲ್ಯಾನ್

0

ವಿಟ್ಲ: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನ ವತಿಯಿಂದ ಕುರುಕ್ಷೇತ್ರದಲ್ಲಿ ನಡೆಸಿದ 33ನೇ ರಾಷ್ಟ್ರೀಯ ಕ್ರೀಡೆ, ಅಥ್ಲೆಟಿಕ್ಸ್ 2022 ರಲ್ಲಿ 19 ವರುಷದ ಕೆಳಗಿನ ಬಾಲಕಿಯರ Hammer throw ಸ್ಪರ್ಧೆಯಲ್ಲಿ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಖುಷಿ ಸಾಲ್ಯಾನ್ ಪ್ರಥಮ ಸ್ಥಾನ ( ಚಿನ್ನದ ಪದಕ), ಗುಂಡೆಸೆತ ಮತ್ತು ಡಿಸ್ಕಸ್ ಕ್ರೋ ದಲ್ಲಿ ದ್ವಿತೀಯ ಸ್ಥಾನ (ಬೆಳ್ಳಿ ಪದಕ )ಪಡೆದಿರುತ್ತಾರೆ. ಖುಷಿ ಸಾಲ್ಯಾನ್ ರವರು ಚಂದಳಿಕೆ ನಿವಾಸಿ ಉಮೇಶ್ ಪೂಜಾರಿ ಮತ್ತು ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆಯಲ್ಲಿಕಾರ್ಯನಿರ್ವಹಿಸುತ್ತಿರುವ ಭವಾನಿರವರ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here