ಏಷಿಯನ್ ವುಡ್ ಮತ್ತು ನ್ಯೂ ಮಂಗಳೂರು:ಇಲೆಕ್ಟ್ರಾನಿಕ್ಸ್‌ನಲ್ಲಿ ಗಿಫ್ಟ್ ಕೂಪನ್ ಬಂಪರ್ ಡ್ರಾ

0

ಪುತ್ತೂರು: ದರ್ಬೆಯಲ್ಲಿ ವ್ಯವಹರಿಸುತ್ತಿರುವ ಏಶಿಯನ್‌ವುಡ್ ಮತ್ತು ಸಮೂಹ ಸಂಸ್ಥೆಗಳಲ್ಲಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಗಿಫ್ಟ್ ಕೂಪನ್ ಬಂಪರ್ ಡ್ರಾ ನ. 19 ರಂದು ಸಂಜೆ ದರ್ಬೆ ಇಲೆಕ್ಟ್ರಾನಿಕ್ಸ್ ಫರ್ನಿಚರ್ ಬೃಹತ್ ಶೋರೂಂ ಐ.ಕೆ ಮಾಲ್‌ನಲ್ಲಿ ನಡೆಯಿತು.

ಡ್ರಾ ಕಾರ್‍ಯಕ್ರಮವನ್ನು ದರ್ಬೆ ಬ್ಯಾಂಕ್ ಆಫ್ ಬರೋಡ ಮೆನೇಜರ್ ಸಾದಿಕ್, ಪುತ್ತೂರು ದೇವತಾ ಸಮಿತಿ ಅಧ್ಯಕ್ಷ ಎನ್. ಸುಧಾಕರ್ ಶೆಟ್ಟಿ, ಗಣೇಶ್ ಟ್ರೇಡರ್‍ಸ್‌ನ ವಾಮನ ಪೈ, ನರಸಿಂಹ ಪೈ, ಸದಾಶಿವ ಪೈ, ನಿಹಾಲ್ ಪೈ, ರಘುನಾಥ ರಾವ್ ನಡೆಸಿಕೊಟ್ಟರು. ಈ ಸಂದರ್ಭದ್ಲಲಿ ಶಿವರಾಂ ರೈ, ಡಾ. ಜಯರಾಮ್ ರೈ, ನಿಹಾಲ್ ರೈ, ರಾಮಕೃಷ್ಣ ಯು.ಪಿ, ಉದಯ ಶಂಕರ್ ಮಯ್ಯ, ಪ್ರಭಾಕರ್, ಜೆ. ವಾಸುದೇವ ಪೈ, ಶಾಕಿರ್ ಹಾಜಿ ಮತ್ತು ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.


ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕರಾದ ಇಸ್ಮಾಯಿಲ್ ಮತ್ತು ಮಕ್ಕಳಾದ ಜಬ್ಬಾರ್ ಮತ್ತು ನವಾಜ್‌ರವರು ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು. ಬಹುಮಾನ ವಿಜೇತರು ಡಿ. 10 ರ ಒಳಗೆ ಬಹುಮಾನವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here