ಈಶ್ವರಮಂಗಲ ಪೇಟೆಗೆ ಬಂಗಾರದ ಮೆರುಗು – ಅಬ್ಕೋ ಗೋಲ್ಡ್ ಚಿನ್ನದ ಮಳಿಗೆ ಶುಭಾರಂಭ

ಅಬ್ಕೋ ಗೋಲ್ಡ್‌ಡೈಮಂಡ್ಸ್ ವೈಶಿಷ್ಟ್ಯತೆಗಳು

  •  100% ಬಿಐಎಸ್ 916 ಹಾಲ್‌ಮಾರ್ಕ್ ಪರಿಶುದ್ದ ಚಿನ್ನಾಭರಣ
  •  ಐಜಿಐ ಪ್ರಮಾಣೀಕೃತ ವಜ್ರಾಭರಣಗಳು
  •  92.5ಹಾಲ್‌ಮಾರ್ಕ್ ಬೆಳ್ಳಿಯ ಆಭರಣಗಳು ಮತ್ತು ವಸ್ತುಗಳು
  •  ಮದುವೆ ಚಿನ್ನಾಭರಣಗಳ ಮೇಲೆ ವಿಶೇಷ ರಿಯಾಯಿತಿ
  •  ಮುಂಗಡ ಬುಕ್ಕಿಂಗ್ ಸೌಕರ್ಯ
  •  ಅತ್ಯಂತ ಕಡಿಮೆ ಮೇಕಿಂಗ್ ಚಾರ್ಜ್
  •  ವೈವಿಧ್ಯ ಶೈಲಿಯ ಆಕರ್ಷಕ ಡಿಸೈನ್‌ನ ಸಂಗ್ರಹ
  •  ಸೇವಾ ಮನೋಭಾವನೆಯ ನುರಿತ ಸಿಬ್ಬಂದಿಗಳು

ಪುತ್ತೂರು: ಈಶ್ವರಮಂಗಲ ಪೇಟೆಯಲ್ಲಿರುವ ಟಿ.ಎ ಕಾಂಪ್ಲೆಕ್ಸ್‌ನಲ್ಲಿ ಅಬ್ಕೋ ಗೋಲ್ಡ್ ಡೈಮಂಡ್ಸ್ ಮಳಿಗೆ ನ.24ರಂದು ಶುಭಾರಂಭಗೊಂಡಿತು.

ಅಸ್ಸಯ್ಯದ್ ಕೆ.ಎಸ್ ಅಲೀ ತಂಳ್ ಕುಂಬೋಳ್ ಹಾಗೂ ಅಸ್ಸಯ್ಯದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಳ್ ಕಣ್ಣವಂ ಆಶೀರ್ವಚನ ನೀಡಿ ಶುಭ ಹಾರೈಸಿದರು. ಮಳಿಗೆಯನ್ನು ಉದ್ಘಾಟಿಸಿದ ಹನುಮಗಿರಿ ಕ್ಷೇತ್ರದ ಮಹಾಪೋಷಕರಾದ ಜಿ.ಕೆ ಮಹಬಲೇಶ್ವರ ಭಟ್ ಮಾತನಾಡಿ ಈಶ್ವರಮಂಗಲದಲ್ಲಿ ಚಿನ್ನ, ವಜ್ರದ ಮಳಿಗೆ ಪ್ರಾರಂಭಗೊಂಡಿರುವುದು ಖುಷಿ ನೀಡಿದ್ದು ಇದು ಈಶ್ವರಮಂಗಲಕ್ಕೆ ಮೆರುಗು ನೀಡಲಿದೆ. ಗ್ರಾಹಕರಿಗೆ ಉತ್ತಮ ಸೇವೆಯ ಮೂಲಕ ಈ ಮಳಿಗೆ ಶ್ರೇಯಸ್ಸು ಪಡೆಯಲಿ ಎಂದು ಹಾರೈಸಿದರು.

ಜಿ.ಪಂ ಮಾಜಿ ಸದಸ್ಯರಾದ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ಸ್ಪರ್ಧಾತ್ಮಕ ದರದಲ್ಲಿ ಚಿನ್ನ ದೊರೆತಾಗ ಅದು ಬಡವರಿಗೆ ಉಪಕಾರವಾಗುತ್ತದೆ. ಗ್ರಾಹಕರಿಗೆ ಉತ್ತಮ ಸೇವೆ ಮತ್ತು ಗುಣಮಟ್ಟದ ಆಭರಣಗಳನ್ನು ಮಾರಾಟ ಮಾಡುವ ಮೂಲಕ ಅಬ್ಕೋ ಮಳಿಗೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಗಜಾನನ ವಿದ್ಯಾಸಂಸ್ಥೆಯ ಸಂಚಾಲಕ ಶಿವರಾಮ ಪಿ ಮಾತನಾಡಿ ಅಬ್ಕೋ ಗೋಲ್ಡ್, ಡೈಮಂಡ್ ಮಳಿಗೆ ಈಶ್ವರಮಂಗಲಕ್ಕೆ ಒಂದು ರೀತಿಯ ಗೌರವ ತಂದು ಕೊಟ್ಟಿದ್ದು ವಿಶ್ವಾಸಾರ್ಹ ಸೇವೆಯ ಮೂಲಕ ಈ ಮಳಿಗೆ ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.

ಕಾವು ಬುಶ್ರಾ ವಿದ್ಯಾಸಂಸ್ಥೆಯ ಸಂಚಾಲಕ ಬುಶ್ರಾ ಅಬ್ದುಲ್ ಅಝೀಝ್ ಮಾತನಾಡಿ ಅಂಗಡಿ ಮಾಡುವುದು ಮುಖ್ಯವಲ್ಲ, ಅದನ್ನು ಮುನ್ನಡೆಸುವುದು ಮುಖ್ಯ. ಅಂತಹ ಮುನ್ನಡೆಸುವ ಯುಕ್ತಿ ಇದರ ಮೂವರು ಪಾಲುದಾರರಲ್ಲಿ ಇದೆ, ಹಾಗಾಗಿ ಈ ಮಳಿಗೆ ಯಶಸ್ಸು ಸಾಧಿಸಲಿದೆ ಎಂದು ಹೇಳಿದರು.

ತಾ.ಪಂ ಮಾಜಿ ಸದಸ್ಯ ರವಿಕಿರಣ್ ಶೆಟ್ಟಿ ಬೆದ್ರಾಡಿ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ಈಶ್ವರಮಂಗಲಕ್ಕೆ ಅಬ್ಕೋ ಚಿನ್ನದ ಮಳಿಗೆ ಬಂದಿರುವುದು ಸಂತಸವಾಗಿದೆ. ಇಲ್ಲಿಗೆ ಡೈಮಂಡ್‌ನ್ನು ಪರಿಚಯಿಸಿದ ಮಳಿಗೆಯ ಮಾಲಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಗಜಾನನ ವಿದ್ಯಾಸಂಸ್ಥೆಯ ಪ್ರಾಚಾರ್ಯ ಕೆ ಶ್ಯಾಮಣ್ಣ ಮಾತನಾಡಿ ಬಂಗಾರ ಎಂದರೆ ವಿಶ್ವಾಸದ ವಿಷಯವಾಗಿದ್ದು ಬಂಗಾರದಂತಹ ಮನಸ್ಸು ಇರುವ ಇದರ ಪಾಲುದಾರರಿಂದ ಈ ಮಳಿಗೆಯನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಮಾತನಾಡಿ ಈಶ್ವರಮಂಗಲ ಪೇಟೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ನೆರೆಯ ಕೇರಳದವರೂ ಈಶ್ವರಮಂಗಲ ಪೇಟೆಯನ್ನು ವಿವಿಧ ಕಾರ್ಯಗಳಿಗೆ ಅವಲಂಬಿಸಿದ್ದಾರೆ. ದೊಡ್ಡ ಪೇಟೆಯಲ್ಲಿ ಮಳಿಗೆ ಪ್ರಾರಂಭಿಸುವ ತಾಕತ್ತು ಇದ್ದರೂ ಹಾಗೆ ಮಾಡದೇ ಈಶ್ವರಮಂಗಲದಲ್ಲಿ ಚಿನ್ನದ ಮಳಿಗೆ ಪ್ರಾರಂಭಿಸಿರುವ ಮಳಿಗೆಯ ಪಾಲುದಾರರು ಅಭಿನಂದನೆಗೆ ಅರ್ಹರಾಗಿದ್ದು ಇಲ್ಲಿ ಶುಭಾರಂಭಗೊಂಡ ಅಬ್ಕೋ ಮಳಿಗೆ ವಿಶ್ವಸ್ಥ ಮಳಿಗೆಯಾಗಿ ಹೆಸರು ಪಡೆಯಲಿ ಎಂದು ಹೇಳಿದರು.

ಪುತ್ತೂರು ತಾ.ಪಂ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ಬಡಗನ್ನೂರು ಮಾತನಾಡಿ ಅಬ್ಕೋ ಮಳಿಗೆಯ ಪಾಲುದಾರರು ಈವರೆಗೆ ಮುಟ್ಟಿದ್ದೆಲ್ಲ ಚಿನ್ನ ಆಗಿದೆ. ಹಾಗಾಗಿ ಈ ಚಿನ್ನದ ಮಳಿಗೆ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ನೆ.ಮುಡ್ನೂರು ಗ್ರಾ.ಪಂ ಸದಸ್ಯ ರಾಮ ಮೇನಾಲ ಮಾತನಾಡಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈಶ್ವರಮಂಗಲಕ್ಕೆ ಅಬ್ಕೋ ಗೋಲ್ಡ್ ಚಿನ್ನದ ಮಳಿಗೆ ಕೊಡುಗೆಯಾಗಿದ್ದು ಈ ಮಳಿಗೆಯವರ ಸೇವೆ ಮತ್ತು ವಿಶ್ವಾಸಾರ್ಹತೆಯಿಂದ ಗ್ರಾಹಕರು ಆಕರ್ಷಿತರಾಗಬೇಕು ಎಂದರು. ಈಶ್ವರಮಂಗಲದಲ್ಲಿ ವರ್ತಕರು ಸಾಕಷ್ಟು ಇದ್ದರೂ ಇಲ್ಲಿ ವರ್ತಕರ ಸಂಘ ಇಲ್ಲ, ಹಾಗಾಗಿ ಒಗ್ಗಟ್ಟಿನ ಮೂಲಕ ಈಶ್ವರಮಂಗಲದಲ್ಲಿ ವರ್ತಕರ ಸಂಘ ಅಸ್ತಿತ್ವಕ್ಕೆ ಬರಬೇಕು ಎಂದು ಅವರು ಹೇಳಿದರು.

ನೆ.ಮುಡ್ನೂರು ಗ್ರಾ.ಪಂ ಸದಸ್ಯ ಇಬ್ರಾಹಿಂ ಪಳ್ಳತ್ತೂರು ಮಾತನಾಡಿ ಉದ್ಯಮಗಳು ಹೆಚ್ಚಾದಂತೆ ಊರು ಅಭಿವೃದ್ಧಿಯಾಗುತ್ತಿದೆ, ಈಶ್ವರಮಂಗಲದಲ್ಲಿ ಮೂರು ಕಾಂಪ್ಲೆಕ್ಸ್‌ಗಳಿಂದ ಉತ್ತಮ ಆದಾಯ ಗ್ರಾ.ಪಂ.ಗೆ ಲಭಿಸುತ್ತಿದ್ದು ಅದನ್ನು ಗ್ರಾಮದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ ಎಂದು ಹೇಳಿ ಅಬ್ಕೋ ಚಿನ್ನದ ಮಳಿಗೆಗೆ ಶುಭ ಹಾರೈಸಿದರು.

ಹಿರಿಯ ವೈದ್ಯ ಡಾ.ಶ್ರೀಕುಮಾರ್ ಮಾತನಾಡಿ ಅಬ್ಕೋ ಚಿನ್ನದ ಮಳಿಗೆ ಇಲ್ಲಿ ಶುಭಾರಂಭಗೊಂಡಿರುವುದರಿಂದ ಊರಿನ ಅಭಿವೃದ್ಧಿಗೆ ಪೂರಕವಾಗಿದೆ, ಆರೋಗ್ಯಕರ ಸ್ಪರ್ಧೆಯಿದ್ದಲ್ಲಿ ಅಭಿವೃದ್ಧಿ ಇರುತ್ತದೆ ಎಂದು ಹೇಳಿದರು.

ಅಡ್ವೊಕೇಟ್ ಹನೀಫ್ ಹುದವಿ ಹಾಗೂ ನಝೀರ್ ಅಝ್ಹರಿ ಈಶ್ವರಮಂಗಲ ಮಾತನಾಡಿ ಅಬ್ಕೋ ಗೋಲ್ಡ್ ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.‌

ಹಿರಾ ಖಾದರ್ ಹಾಜಿ, ನ್ಯಾಯವಾದಿ ಮೊಹಮ್ಮದ್ ಫವಾಝ್, ಅಬ್ದುಲ್ ಹಮೀದ್ ಬೀಜಕೊಚ್ಚಿ ಮೊದಲಾದವರು ಶುಭ ಹಾರೈಸಿದರು.

ನೆ.ಮುಡ್ನೂರು ಗ್ರಾ.ಪಂ ಪಿಡಿಓ ಸಂದೇಶ್ ಕೆ.ಎನ್, ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಸಮಿತಿ ವ್ಯವಸ್ಥಾಪಕ ವಿಕ್ರಂ ರೈ ಸಾಂತ್ಯ, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಸಂಶುದ್ದೀನ್ ಪಿ, ದೇಲಂಪಾಡಿ ಗ್ರಾ.ಪಂ ಅಧ್ಯಕ್ಷ ಮುಸ್ತಫ ಹಾಜಿ, ಟಿ.ಎ ಅಬ್ದುಲ್ ಖಾದರ್ ಹಾಜಿ, ಶಿವ ಎಂಟರ್‌ಪ್ರೆಸ್‌ನ ವಿಠಲ ಶೆಟ್ಟಿ ಎಸ್, ಡಾ.ಉದನೇಶ್ವರ ಭಟ್, ಪೂಪಿ ಸಾಫ್ಟ್ ಡ್ರಿಂಕ್ಸ್‌ನ ಮಾಲಕ ಅಬೂಬಕ್ಕರ್ ಎನ್.ಎಸ್ ಮೊದಲಾದವರು ಉಪಸ್ಥಿತರಿದ್ದರು. ಮಹಮ್ಮದ್ ಹಾರಿಸ್ ಮದನಿ ಪಾಡ್ರಕೋಡಿ ಮತ್ತು ರಫೀಕ್ ಮಡಿಕೇರಿ ಕಾರ್ಯಕ್ರಮ ನಿರೂಪಿಸಿದರು. ಅಬ್ಕೋ ಗೋಲ್ಡ್‌ಡೈಮಂಡ್ಸ್ ಗ್ರೂಪ್‌ನವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನೂರಾರು ಮಂದಿ ನೂತನ ಮಳಿಗೆಗೆ ಭೇಟಿ ನೀಡಿ ಶುಭ ಹಾರೈಸಿದರು.‌

ಉದ್ಘಾಟನೆ ಪ್ರಯುಕ್ತ ಭರ್ಜರಿ ಕೊಡುಗೆ: ಅಬ್ಕೋ ಗೋಲ್ಡ್ ಮಳಿಗೆ ಶುಭಾರಂಭದ ಪ್ರಯುಕ್ತ ಕೊಡುಗೆಗಳನ್ನು ಘೋಷಿಸಿ ಪ್ರತೀ ಖರೀದಿಗೂ ಉಚಿತ ಕೂಪನ್ ಮೂಲಕ ಬಂಪರ್ ಡ್ರಾ ಮೂಲಕ ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಹಾಗೂ 32 ಎಲ್‌ಇಡಿ ಟಿವಿ ಪಡೆಯುವ ಅವಕಾಶ ಕಲ್ಪಿಸಿದೆ. ನ.24ರಿಂದ ಡಿ.5ರ ವರೆಗೆ ಉಚಿತವಾಗಿ ಕಿವಿ ಹಾಗೂ ಮೂಗು ಚುಚ್ಚಿ ಕೊಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಲಕ್ಕಿ ಡ್ರಾ ಮೂಲಕ ಚಿನ್ನದ ನಾಣ್ಯ

ಶುಭಾರಂಭ ಪ್ರಯುಕ್ತ ಅಬ್ಕೋ ಮಳಿಗೆಯ ಕೂಪನ್‌ನ್ನು ಲಕ್ಕಿ ಬಾಕ್ಸ್‌ನಲ್ಲಿ ಹಾಕಿ ಪ್ರತೀ ಗಂಟೆಗೊಮ್ಮೆ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಕಲ್ಪಿಸಲಾಗಿತ್ತು. ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಲಕ್ಕಿ ಡ್ರಾಗೆ ಚಾಲನೆ ನೀಡಿದರು. ಹಲವರು ಲಕ್ಕಿ ಡ್ರಾ ಮೂಲಕ ಬಹುಮಾನ ಪಡೆದುಕೊಂಡರು.


ಗಮನ ಸೆಳೆದ ಮುಈನುದ್ದೀನ್, ರವಿ ರಾಮಕುಂಜ:

ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಮುಈನುದ್ದೀನ್ ಖಾದಿರಿ ಬೆಂಗಳೂರು ಭಾಗವಹಿಸಿ ತಮ್ಮ ಸಂಗಡಿಗರೊಂದಿಗೆ ನಅತೇ ಶರೀಫ್ ಆಲಾಪನೆ ಮಾಡಿದರು. ಹಾಸ್ಯ ನಟ ಅರವಿಂದ ಬೋಳಾರ್ ಅವರು ಅನಾರೋಗ್ಯದಿಂದ ಗೈರಾದ ಹಿನ್ನೆಲೆಯಲ್ಲಿ ಅವರ ಬದಲಿಗೆ ಇನ್ನೋರ್ವ ಹಾಸ್ಯನಟ ರವಿ ರಾಮಕುಂಜ ಭಾಗವಹಿಸಿದ್ದರು. ಕೆಲಕಾಲ ಹಾಸ್ಯ ಭರಿತ ಮಾತುಗಳನ್ನಾಡಿದ ರವಿ ರಾಮಕುಂಜ ಅವರು ನೆರೆದಿದ್ದವರನ್ನು ನಗೆಗಡಲಿನಲ್ಲಿ ತೇಲಿಸಿದರು.

ಅಭಿವೃದ್ಧಿಗೆ ಇನ್ನೊಂದು ಕೊಡುಗೆ-ರಮೇಶ್ ರೈ

ಅಧ್ಯಕ್ಷತೆ ವಹಿಸಿದ್ದ ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ ಈಶ್ವರಮಂಗಲ ಪೇಟೆ ಇತ್ತೀಚೆಗೆ ಅಭಿವೃದ್ಧಿ ಕಾಣುತ್ತಿದ್ದು ಗಡಿ ಭಾಗದ ಜನರು ಹೆಚ್ಚು ನೆಚ್ಚಿಕೊಂಡಿರುವ ಪೇಟೆ ಇದಾಗಿದೆ. ಇದೀಗ ಸುಸಜ್ಜಿತ ಚಿನ್ನದ ಮಳಿಗೆ ಪ್ರಾರಂಭಗೊಂಡಿರುವುದು ಅಭಿವೃದ್ಧಿಗೆ ನೀಡಿದ ಇನ್ನೊಂದು ಕೊಡುಗೆಯಾಗಿದೆ ಎಂದರು. ವರ್ತಕರ ಎಲ್ಲ ಕಾರ್ಯಗಳಿಗೆ ಗ್ರಾ.ಪಂ ಸಂಪೂರ್ಣ ಸಹಕಾರ ನೀಡುತ್ತಿದ್ದು ಗ್ರಾಮದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.