ನ.27: ವೀರಮಂಗಲ ಮಹಾವಿಷ್ಣು ಸೇವಾ ಸಮಿತಿಯ ಕ್ರೀಡಾ ಸಂಭ್ರಮ

* ಮುಕ್ತ ಕಬಡ್ಡಿ ಪಂದ್ಯಾಟ
* ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು

ಪುತ್ತೂರು:ವೀರಮಂಗಲ ಆನಾಜೆ ಶ್ರೀ ಮಹಾವಿಷ್ಣು ಸೇವಾ ಸಮಿತಿಯ 22ನೇ ವಾರ್ಷಿಕ ಸಂಭ್ರಮದ ಅಂಗವಾಗಿ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿಯ ಸಹಕಾರದೊಂದಿಗೆ ಕ್ರೀಡಾ ಸಂಭ್ರಮ-2022 ನ.27ರಂದು ವೀರಮಂಗಲ ಹಿ.ಪ್ರಾ ಶಾಲಾ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ 9.30ಕ್ಕೆ ಕ್ರೀಡಾ ಸಂಭ್ರಮದ ಉದ್ಘಾಟನೆಗೊಳ್ಳಲಿದೆ. ಬಳಿಕ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅಭಿನಯ ಗೀತೆ, ಒಂಟಿಕಾಲಿನ ಓಟ, ಹಿರಿಯ ವಿದ್ಯಾರ್ಥಿಗಳಿಗೆ ರಂಗೋಲಿ, ದಾಸರಪದ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುಂಡೆಸೆತ, ಗೋಣಿಚೀಲ ಓಟ, ವಿದ್ಯಾರ್ಥಿನಿಯರಿಗೆ ಜನಪದಗೀತೆ, ಸಂಗೀತ ಕುರ್ಚಿ, ಮಹಿಳೆಯರಿಗೆ ಲಗೋರಿ, ಬೊಗಸೆನೀರು ಮತ್ತು ಮನೋರಂಜನಾ ಸ್ಪರ್ಧೆಗಳು, ಪುರುಷರಿಗೆ ಗುಂಡೆಸೆತ, ನಿಧಾನ ಮೋಟಾರ್ ಸೈಕಲ್ ಓಟ ಸ್ಪರ್ಧೆಗಳು ನಡೆಯಲಿದೆ.

ಕಬಡ್ಡಿ ಪಂದ್ಯಾಟ:

ಕ್ರೀಡಾ ಸಂಭ್ರಮದಲ್ಲಿ ಪುರುಷರಿಗೆ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದ್ದು ಪ್ರಥಮ ರೂ.5555, ದ್ವಿತೀಯ ರೂ.4444, ತೃತೀಯ ರೂ.2222 ಹಾಗೂ ಚತುರ್ಥ ರೂ.2222 ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.

ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಮಹಾವಿಷ್ಣು ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಡೆಬ್ಬಿಲಿ ಅಧ್ಯಕ್ಷತೆ ವಹಿಸಲಿದ್ದಾರೆ. ವೀರಮಂಗಲ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕ ತಾರಾನಾಥ ಸವಣೂರು, ಆನಾಜೆ ಶ್ರೀ ಮಹಾಲಿಂಗೇಶ್ವರ ಕಟ್ಟೆಪೂಜೆ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ವಿ.ಪೆಲತ್ತಡಿ, ನರಿಮೊಗರು ಗ್ರಾ.ಪಂ ಸದಸ್ಯೆ ಪದ್ಮಾವತಿ ಎಂ., ವೀರಮಂಗಲ ವೈಷ್ಣವಿ ಮಹಿಳಾ ಮಂಡಲದ ಅಧ್ಯಕ್ಷೆ ಉಷಾ ಜೆ.ರೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಡಿ.13 ಶನೈಶ್ಚರ ಪೂಜೆ:

ಶ್ರೀಮಹಾವಿಷ್ಣು ಸೇವಾ ಸಮಿತಿಯ 22ನೇ ವಾರ್ಷಿಕ ಸಂಭ್ರಮದ ಅಂಗವಾಗಿ ಸಾರ್ವಜನಿಕ ಶ್ರೀಶನೈಶ್ಚರ ಪೂಜೆಯು ಡಿ.3ರಂದು ಸಂಜೆ ವೀರಮಂಗಲ ಆನಾಜೆ ಶ್ರೀಮಹಾಲಿಂಗೇಶ್ವರ ದೇವರ ಕಟ್ಟೆಯಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.