ನ.27 :ಬಡಗನ್ನೂರು ಗೆಜ್ಜೆಗಿರಿ ಕ್ಷೇತ್ರದಲ್ಲಿ ಶ್ರೀ ಗೆಜ್ಜೆಗಿರಿ ಮೇಳದ ಉದ್ಘಾಟನೆ, ದೇವರ ಪ್ರಥಮ ಸೇವೆಯಾಟ

ಪುತ್ತೂರು: ಬಡಗನ್ನೂರು ಮೂಲಸ್ಥಾನ ಗೆಜ್ಜೆಗಿರಿಯ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಪೋಷಿತ ಯಕ್ಷಗಾನ ಮಂಡಳಿಯ ಶ್ರೀ ಗೆಜ್ಜೆಗಿರಿ ಕ್ಷೇತ್ರದಲ್ಲಿ ಶ್ರೀ ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ ಸೇವೆ ಆಟವು ನ.27 ರಂದು ಜರಗಲಿದೆ.

ಸಂಜೆ ನಡೆಯವ ಸಭಾ ಕಾರ್ಯಕ್ರಮದಲ್ಲಿ ಸೋಲೂರು ಮಠದ ಆರ್ಯ-ಈಡಿಗ(ಬಿಲ್ಲವ) ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಅರ್ಚಕ ಕಮಲಾದೇವಿ ಅಸ್ರಣ್ಣರವರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ ಪೀತಾಂಬರ ಹೆರಾಜೆರವರು ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಸಂಶೋಧಕ ಡಾ.ಅರುಣ್ ಉಳ್ಳಾಲ್‌ರವರು ಧರ್ಮದ ಕುರಿತು ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ರಾಜ್ಯ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಸಹಿತ ಹಲವರು ಭಾಗವಹಿಸಲಿದ್ದಾರೆ.

ಗೌರವಾರ್ಪಣೆ:
ಈ ಸಂದರ್ಭದಲ್ಲಿ ಕಂಕನಾಡಿ ಬ್ರಹ್ಮ ಬೈದೆರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್‌ರವರಿಗೆ ಶ್ರೀ ಧರ್ಮರತ್ನ ಪ್ರಶಸ್ತಿ, ತೆಂಕು-ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ಗೋವಿಂದಪ್ಪರವರಿಗೆ ಶ್ರೀ ದೇಯಿ ಬೈದೆತಿ ಮಾತೃ ಸನ್ಮಾನ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಹಿರಿಯ ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್‌ರವರಿಗೆ ಶ್ರೀ ಸಾಯನ ಬೈದ್ಯ ಗುರು ಸನ್ಮಾನ, ರಾಜ್ಯ ಪ್ರಶಸ್ತಿ ವಿಜೇತರಾದ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರಿಗೆ ಯಕ್ಷಕೋಟಿ ಸಾಧಕ ಸನ್ಮಾನ, ಕಲಾ ಪೋಷಕರಾದ ಪಚ್ಚಿನಡ್ಕ ಸೇಸಪ್ಪ ಕೋಟ್ಯಾನ್ ಹಾಗೂ ಪೆರ್ಮುದೆ ಯಾದವ ಕೋಟ್ಯಾನ್‌ರವರಿಗೆ ಕೋಟಿ-ಚೆನ್ನಯ ಕಲಾ ಪೋಷಕ ಸನ್ಮಾನ ನೀಡುವ ಮೂಲಕ ಗೌರವಿಸಲಾಗುತ್ತಿದೆ.

ಅಭಿನಂದನಾ ಸನ್ಮಾನ:
ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಾದ ಶ್ರೀ ಪಾವಂಜೆ ಮೇಳದ ಪಟ್ಲ ಸತೀಶ್ ಶೆಟ್ಟಿ, ಶ್ರೀ ಹನುಮಗಿರಿ ಮೇಳದ ರವಿಚಂದ್ರ ಪೂಜಾರಿ ಕನ್ನಡಿಕಟ್ಟೆ, ಶ್ರೀ ಗೆಜ್ಜೆಗಿರಿ ಮೇಳದ ಗಿರೀಶ್ ರೈ ಕಕ್ಕೆಪದವು, ನಿರಂಜನ ಪೂಜಾರಿ ಬಡಗ ಬೆಳ್ಳೂರು, ಬಡಗು ತಿಟ್ಟಿನ ಭಾಗವತರಾದ ಆರ್.ಡಿ ಸಂತೋಷ್ ಪೂಜಾರಿ, ತೆಂಕುತಿಟ್ಟಿನ ಮಹಿಳಾ ಭಾಗವತರಾದ ಶ್ರೀಮತಿ ಭವ್ಯಶ್ರೀ ಮಂಡೆಕೋಲು, ಶ್ರೀಮತಿ ಕಾವ್ಯಶ್ರೀ ಅಜೇರು, ಬಡಗು ತಿಟ್ಟಿನ ಉದಯೋನ್ಮುಖ ಮಹಿಳಾ ಭಾಗವತರಾದ ಕು|ಇಂಚರ ಪೂಜಾರಿ ಶಿವಪುರರವರಿಗೆ ಅಭಿನಂದನಾ ಸನ್ಮಾನ ನೆರವೇರಲ್ಪಡಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರದಲ್ಲಿ…
-ಬೆಳಿಗ್ಗೆ ದ್ವಾದಶನಾರಿಕೇಳ ಗಣಯಾಗ, ಮಹಾಪೂಜೆ
-ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ
-ಅಪರಾಹ್ನ ತೆಂಕು ಹಾಗೂ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷನಾಟ್ಯ ಗಾನ ವೈಭವ
-ಸಂಜೆ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಗೌರವಾರ್ಪಣೆ
-ರಾತ್ರಿ ಚೌಕಿ ಪೂಜೆ ಹಾಗೂ ಬೆಳಗ್ಗಿನವರೆಗೆ ದೇವರ ಪ್ರಥಮ ಸೇವೆಯಾಟ
-ಸಂಜೆಯಿಂದ ದುರ್ಗಾ ನಮಸ್ಕಾರ ಪೂಜೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.