ಪ್ರತಿಯೊಬ್ಬ ವಕೀಲರು ದೇಶದ ಸೈನಿಕರಂತೆ – ವಿಶೇಷ ಕಾನೂನು ಕಾರ್ಯಗಾರದಲ್ಲಿ ನ್ಯಾ| ಮೂ ಕೃಷ್ಣ ಎಸ್ ದೀಕ್ಷಿತ್

0

ಪುತ್ತೂರು: ದೇಶದ ಭದ್ರತೆಗೆ ತೊಂದರೆ ಆಗದಂತೆ ಗಡಿ ಕಾಯುವಲ್ಲಿ ಸೈನಿಕರ ಕಾರ್ಯ ಮಹತ್ವದ್ದು, ಅದೇ ರೀತಿ ಸಮಾಜದ ವ್ಯಕ್ತಿಗಳ ಸ್ವಾತಂತ್ರ್ಯ ಹರಣ ಆಗದಂತೆ ನೋಡುವವರು ವಕೀಲರು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಕೀಲನೂ ದೇಶದ ಸೈನಿಕರಂತೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್, ದೀಕ್ಷಿತ್ ಅವರು ಹೇಳಿದರು.

ವಕೀಲರ ಸಂಘ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಸಂವಿಧಾನ ದಿನದ ಅಂಗವಾಗಿ ನ್ಯಾಯಾಲಯದ ಪರಾಶರ ಸಭಾಭವನದಲ್ಲಿ ನ.25 ರಂದು ನಡೆದ ವಿಶೇಷ ಕಾನೂನು ಕಾರ್ಯಗಾರ ‘ವಕೀಲರ ವೃತ್ತಿ ಶ್ರೇಷ್ಠ ಅನುಭೂತಿ’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವಕೀಲರು ಕೂಡಾ ದೇಶದ ಸೈನಿಕರಂತೆ ಎಂದ ಅವರು ಸಮಾಜದ ವ್ಯಕ್ತಿಗಳ ಸ್ವಾತಂತ್ರ್ಯ ಹರಣ ಆಗದಂತೆ ವಕೀಲರು ಇಲ್ಲದೆ ಏನು ಮಾಡಲಾಗುವುದಿಲ್ಲ. ವಕೀಲರೆ ಇಲ್ಲದಿದ್ದರೆ ನ್ಯಾಯಾಧೀಶರು ಕೂಡಾ ಏನು ಮಾಡಲು ಸಾಧ್ಯವಿಲ್ಲ. ಸಂವಿಧಾನದ ವ್ಯವಸ್ಥೆ ವಕೀಲರನ್ನು ಅವಲಂಭಿಸಿದೆ. ಒಬ್ಬ ರೈತ ಹೊಲಕ್ಕೆ ಹೋಗಲ್ಲ, ಸೈನಿಕ ಯುದ್ದ ಮಾಡಲ್ಲ ಎಂದು ಹೇಳಿದರೆ ಹೇಗೆ ಆಗುತ್ತದೆಯೋ ವಕೀಲರು ಪ್ರತಿಭಟಿಸಿದರೆ, ಕೋರ್ಟ್‌ನ ಕಲಾಪಗಳಿಂದ ದೂರ ಉಳಿದರೆ ಏನಾದಿದು ಎಂದು ಒಮ್ಮೆ ಚಿಂತನೆ ಮಾಡಿ ಎಂದರು. ಅನ್ಯ ರಾಷ್ಟ್ರಗಳಲ್ಲಿ ವಕೀಲ ವೃತ್ತಿಯನ್ನೇ ಇಲ್ಲದಂತೆ ಮಾಡುವ ಕೆಲಸ ನಡೆಯುತ್ತಿದೆ. ಆದರೆ ಸಮಾಜದಕ್ಕೆ ಚಲನ ಶಕ್ತಿ ಬರಬೇಕಾದರೆ ವಕೀಲರು ಬೇಕೇ ಬೇಕು. ಸಂವಿಧಾನ ಹೆಮ್ಮರವಾಗಿ ಬೆಳೆಯಲು ವಕೀಲರು ಮಹತ್ ಕೆಲಸ ಮಾಡಿದ್ದಾರೆ. ವಕೀಲರು ಅಧ್ಯಯನಶೀಲರಾಗಿರಬೇಕು. ಭಾಷ ಸೌಂದರ್ಯ ಇರಬೇಕು ಈ ನಿಟ್ಟಿನಲ್ಲಿ ವಕೀಲರ ಸಂಘದಿಂದ ನಡೆಯುತ್ತಿರುವ ಕಾರ್ಯಗಾರದಲ್ಲಿ ಅನುಭೂತಿ ತಲೆಬರಹ ಉತ್ತಮವಾಗಿದೆ ಎಂದರು.

ಸಮಾಜಕ್ಕೆ ನಮ್ಮಿಂದ ಏನು ಎಂಬ ಚಿಂತನೆ ಇರಲಿ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ನರಗುಂದ ಎಂ.ವಿ ಅವರು ಮಾತನಾಡಿ ಸಂವಿಧಾನ ದಿನವನ್ನು ವಕೀಲರು ಆಚರಣೆ ಮಾಡುವ ಕುರಿತು ಅರಂಭದಲ್ಲಿ ನಿರ್ಣಯ ಮಾಡಿದ್ದರು. ಅದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ಸರಕಾರ ಕೆಲಸ ಮಾಡಿತ್ತು. ಹಾಗಾಗಿ ಸಂವಿಧಾನ ದಿನ ಅಚರಣೆಯಲ್ಲಿ ವಕೀಲರ ಅಲ್ಪಕಾಣಿಕೆ ಇದೆ ಎಂದ ಅವರು ವಕೀಲರಾಗಿ ನಾವು ಇವತ್ತಿನ ಒಂದು ದಿನದ ಕನಸು ಕಾಣುವುದು ಬೇಡ. ಮುಂದಿನ 50 ವರ್ಷದ ನ್ಯಾಯಾಂಗ ವಿಚಾರ ಹೇಗಿರುತ್ತದೆ ಎಂಬುದನ್ನು ಚಿಂತನೆ ಮಾಡಬೇಕು ಮತ್ತು ಸಮಾಜಕ್ಕೆ ನಮ್ಮಿಂದ ಏನು ಎಂಬ ಚಿಂತನೆಯು ಇರಬೇಕೆಂದರು.

ವಕೀಲರಿಲ್ಲದೆ ಸಮಾಜದ ಅರಿವು ಸಾಧ್ಯವಿಲ್ಲ:
5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಓಂಕಾರಪ್ಪ ಅವರು ಮಾತನಾಡಿ ವಕೀಲರಿಲ್ಲದೆ ಸಮಾಜದಲ್ಲಿ ಏನು ತಿಳಿಯಲು ಸಾಧ್ಯವಿಲ್ಲ. ಇದು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ವಕೀಲರು ಇಲ್ಲದಿದ್ದರೆ ನ್ಯಾಯಾಧೀಶರು ಏನು ಮಾಡುವ ಹಾಗಿಲ್ಲ ಎಂದರು.

ಪುತ್ತೂರು ವಕೀಲರಿಂದ ಕಾನೂನು ಸರಳ ಮಾಲಿಕೆ:
ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ಪುತ್ತೂರು ವಕೀಲರ ಸಂಘದ ವಕೀಲರು ವೃತ್ತಿಯಲ್ಲಿ ಮಾತ್ರವಲ್ಲದೆ ಕಾನೂನು ಬರಹ ಬರೆದಿದ್ದಾರೆ. ಕವಿ ಹೃದಯವಂತಿಕೆವುಳ್ಳವರು. ವಕೀಲರ ಅನುಭವ ತೋರಿಸುವ ಕಾನೂನು ಸರಳ ಮಾಲಿಕೆಯನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದೇವೆ. ಇದು ಇತರ ಭಾಗದ ವಕೀಲರಿಗೂ ಪ್ರಯೋಜವಾಗುತ್ತದೆ ಎಂದರು. ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಶಶಿಕಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ಕೋಶಾಧಿಕಾರಿ ಶ್ಯಾಮಪ್ರಸಾದ್ ಕೈಲಾರ್, ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್ ಅವರು ಅತಿಥಿಗಳಿಗೆ ಪುಸ್ತಕ, ವೀಲ್ಯ ನೀಡಿ ಗೌರವಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾಗಿರುವ ನ್ಯಾಯವಾದಿ ಮುರಳಿಕೃಷ್ಣ ಚಲ್ಲಂಗಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್ ವಂದಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ದುರ್ಗಾಪ್ರಸಾದ್ ರೈ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು.

ಆರತಿ ಬೆಳಗಿ ಸ್ವಾಗತ:
ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್, ದೀಕ್ಷಿತ್ ಅವರು ಪುತ್ತೂರು ನ್ಯಾಯಾಲಯಕ್ಕೆ ಬರುವ ಸಂದರ್ಭ ಅವರನ್ನು ಚೆಂಡೆ ಸದ್ದಿನೊಂದಿಗೆ ಆರತಿ ಬೆಳಗಿಸಿ ಸ್ವಾಗತಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಅವರನ್ನು ವಕೀಲರ ಸಂಘದದಿಂದ ಗೌರವಿಸಿ ಸನ್ಮಾನಿಸಲಾಯಿತು. ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಗೌಡ ಆರ್.ಪಿ ಅವರು ನ್ಯಾಯಾಧೀಶರುಗಳ ಪರವಾಗಿ ಸನ್ಮಾನಿಸಿದರು. ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅರ್ಚನಾ ಕೆ. ಉಣ್ಣಿತಾನ್, 2ನೇ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಯೋಗೇಂದ್ರ ಶೆಟ್ಟಿ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಂಎಫ್‌ಸಿ ಪ್ರೀಯ ಜೊಲೆಕಾರ್, ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಶಿವಣ್ಣ ಎಚ್.ಆರ್ ಸಹಿತ ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ, ಸರಕಾರಿ ಅಭಿಯೋಜಕರು ಮತ್ತು ವಕೀಲರ ಸಂಘದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಗಾರದಲ್ಲಿ ಸಂವಿಧಾನ ಪೀಠಿಕೆ ವಾಚನ
ಕಾರ್ಯಗಾರದ ಕೊನೆಯಲ್ಲಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಗೌಡ ಆರ್.ಪಿ ಅವರು ಸಂವಿಧಾನದ ಪೀಠಿಕೆಯನ್ನು ವಾಚನ ಮಾಡಿದರು. ವೇದಿಕೆಯ ಗಣ್ಯರು ಮತ್ತು ಸಭೆಯಲ್ಲಿ ನೆರೆದವರು ಸಂವಿಧಾನ ಪೀಠಿಕೆಯನ್ನು ವಾಚಿಸಿದರು.

LEAVE A REPLY

Please enter your comment!
Please enter your name here