ಒಳಮೊಗ್ರು ಗ್ರಾಪಂನಿಂದ ಗ್ರಾಪಂ ರಸ್ತೆಗಳಿಗೆ ನಾಮಫಲಕ ಬೋರ್ಡ್ ಅಳವಡಿಕೆ, ಉದ್ಘಾಟನೆ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ಗ್ರಾಮದ ಅಭಿವೃದ್ಧಿಗೆ ಪೂರಕವಾಗುವ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಇದೀಗ ಗ್ರಾಮ ಪಂಚಾಯತ್ ರಸ್ತೆಗಳಿಗೆ ನಾಮಫಲಕ ಬೋರ್ಡ್ ಅಳವಡಿಸುವ ಕಾರ್ಯ ಮಾಡಿದ್ದು ಇದರ ಉದ್ಘಾಟನೆ ನ.25 ರಂದು ನಡೆಯಿತು.

ಪಂಚಾಯತ್‌ನ 2022-23 ನೇ ಸಾಲಿನ ಸ್ವಂತ ನಿಧಿಯಿಂದ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಪ್ರಥಮ ಹಂತದಲ್ಲಿ ಗ್ರಾಮದ ಒಟ್ಟು 29 ರಸ್ತೆಗಳಿಗೆ ನಾಮಫಲಕ ಅಳವಡಿಸಲಾಗಿದೆ. ಬಿಜಳ-ಅಲೆಂಬಾಡಿ ರಸ್ತೆಯ ನಾಮಫಲಕವನ್ನು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮತ್ತು ಉಪಾಧ್ಯಕ್ಷೆ ಸುಂದರಿಯವರು ಹೂ ಹಾರ ಹಾಕಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್, ಕಾರ್ಯದರ್ಶಿ ಜಯಂತಿ, ಸದಸ್ಯರುಗಳಾದ ಮಹೇಶ್ ಕೇರಿ, ವಿನೋದ್ ಶೆಟ್ಟಿ ಮುಡಾಲ, ಲತೀಪ್, ಶೀನಪ್ಪ ನಾಯ್ಕ, ಪ್ರದೀಪ್, ರೇಖಾ, ವನಿತಾ, ಚಿತ್ರಾ ಬಿ.ಸಿ, ಶಾರದಾ, ಗ್ರಾಪಂ ಸಿಬ್ಬಂದಿಗಳಾದ ಗುಲಾಬಿ, ಕೇಶವ, ಗ್ರಂಥಪಾಲಕಿ ಸಿರಿನಾ, ಪೂವಯ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

` ಪಂಚಾಯತ್‌ನ ಸ್ವಂತ ನಿಧಿಯ ಅನುದಾನದಲ್ಲಿ ಗ್ರಾಪಂ ರಸ್ತೆಗಳಿಗೆ ನಾಮಫಲಕ ಅಳವಡಿಸಲಾಗುತ್ತಿದ್ದು ಪ್ರಥಮ ಹಂತದಲ್ಲಿ 29ರಸ್ತೆಗಳಿಗೆ ಬೋರ್ಡ್ ಅಳವಡಿಸಲಾಗಿದೆ. ಮುಂದೆ ಹಂತಹಂತವಾಗಿ ನಾಮಫಲಕ ಅಳವಡಿಸುವ ಕಾರ್ಯ ನಡೆಯಲಿದೆ.’
ಅವಿನಾಶ್ ಬಿ.ಆರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ

LEAVE A REPLY

Please enter your comment!
Please enter your name here