ಪುತ್ತೂರು: ಕೆಯ್ಯೂರು ಗ್ರಾಮದ ಎರಕ್ಕಾಳ ತರವಾಡು ಮನೆ ಯಜಮಾನ ಎಲ್ಯಣ್ಣ ಗೌಡ(91ವ.)ರವರು ಅನಾರೋಗ್ಯದಿಂದ ನ.29ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಪ್ರಗತಿಪರ ಕೃಷಿಕರಾಗಿದ್ದ ಎಲ್ಯಣ್ಣ ಗೌಡರವರು ಹಲವಾರು ವರ್ಷಗಳಿಂದ ಎರಕ್ಕಾಳ ತರವಾಡು ಮನೆಯ ಯಜಮಾನರಾಗಿದ್ದು ತರವಾಡು ಮನೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಇವರ ನೇತ್ರತ್ವದಲ್ಲಿ ಗೋಂದೋಳು ಪೂಜೆ, ನೇಮೋತ್ಸವ ನಡೆಯುತ್ತಿತ್ತು. ಇವರು ಅಪಾರ ದೈವ, ದೇವರ ಭಕ್ತರಾಗಿದ್ದರು. ಶಿಕ್ಷಣ ಪ್ರೇಮಿಯಾಗಿ, ಊರಗೌಡರಾಗಿಯೂ ಪ್ರಸಿದ್ದಿ ಪಡೆದಿದ್ದರು. ಕಳೆದ ಒಂದೂವರೇ ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.
ಮೃತರು ಪತ್ನಿ ಕಮಲ, ಪುತ್ರರಾದ ಜಗನ್ನಾಥ ಗೌಡ ಎರಕ್ಕಾಳ, ಬಾಲಕೃಷ್ಣ ಗೌಡ ಎರಕ್ಕಾಳ, ಜಯರಾಜ್ ಗೌಡ ಎರಕ್ಕಾಳ, ತಾರನಾಥ ಗೌಡ ಎರಕ್ಕಾಳ, ಪುತ್ರಿಯರಾದ ಲೀಲಾವತಿ ಕುಡ್ಚಿಲ, ದೇವಕಿ ಆನೆಗುಂಡಿ, ಸೊಸೆಯಂದಿರಾದ ವೇದಾವತಿ, ಭವಾನಿ, ಮೋಹಿನಿ, ಶಶಿಕಲ, ಅಳಿಯಂದಿರಾದ ಆನಂದ ಗೌಡ ಕುಡ್ಚಿಲ, ಗುಮ್ಮಣ್ಣ ಗೌಡ ಆನೆಗುಂಡಿ ಹಾಗೂ ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.