ದರ್ಬೆತ್ತಡ್ಕ: ಶ್ರೀ ಅಯ್ಯಪ್ಪ ಭಜನಾಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವ, ನೂತನ ರಂಗಮಂಟಪ ಉದ್ಘಾಟನೆ

0

ಭಜನಾಮಂದಿರಗಳು ಗ್ರಾಮದ ಶ್ರದ್ದಾ ಕೇಂದ್ರಗಳಾಗಿದೆ: ವಸಂತ ಗೌಡ ಉರ್ವ

ಪುತ್ತೂರು; ಭಜನಾಮಂದಿರಗಳು ಗ್ರಾಮದ ಧಾರ್ಮಿಕ ಶ್ರದ್ದಾಕೇಂದ್ರವಾಗಿದ್ದು , ಧರ್ಮ ಜಾಗೃತಿಯ ಮೂಡಿಸುವ ಕೆಲಸವೂ ಭಜನಾಮಂದಿರಗಳಿಂದ ಅಗಬೇಕು ಎಂದು ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾಮಂದಿರದ ಗೌರವಾಧ್ಯಕ್ಷರಾದ ವಸಂತಗೌಡ ಉರ್ವ ಹೇಳಿದರು.


ಅವರು ದ.6  ರಂದು ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾಮಂದಿರದ ನೂತನ ಭಜನಾಮಂಟಪವನ್ನು ಉದ್ಘಾಟಿಸಿ ಮಾತನಾಡಿದರು.
ಭಜನೆಗೆ ವಿಭಜನೆಯನ್ನು ತಡೆಯುವ ಶಕ್ತಿ ಇದೆ ಆದ್ದರಿಂದ ಮಕ್ಕಳಲ್ಲಿ ಭಜನೆಯ ಆಸಕ್ತಿಯನ್ನು ಮೂಡಿಸುವ ಕೆಲಸ ಹೆತ್ತವರಿಂದ ಆಗಬೇಕು. ಭಜನಾಮಂದಿರಗಳಲ್ಲಿ ಪ್ರತೀ ವಾರ ಭಜನಾ ಕಾರ್ಯ ನಡೆಯುತ್ತಿರಬೇಕು ಈ ಕಾರ್ಯಕ್ರಮದಲ್ಲಿ ಊರಿನ ಭಕ್ತಾದಿಗಳು ಸೇರಬೇಕಾಗಿದೆ ಎಂದು ಹೇಳಿದರು.

ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ನೂತನವಾಗಿ ಭಜನಾಮಂಟಪವನ್ನು ಲೋಕಾರ್ಪಣೆ ಮಾಡಲಾಗಿದ್ದು ಸ್ಥಳೀಯ ಎಲ್ಲಾ ಭಕ್ತಾದಿಗಳು ಬಜನಾಮಂದಿರದ ಜೊತೆ ನಿತ್ಯ ಸಂಪರ್ಕ ಉಳ್ಳವರಾಗಬೇಕು ಎಂದು ಹೇಳಿದರು.

ಶ್ರೀ ಅಯ್ಯಪ್ಪ ಭಜನಾಂದಿರದ ಅಧ್ಯಕ್ಷರಾದ ಬಾಲಕೃಷ್ಣ ರೈ ಸೇರ್ತಾಜೆ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಗ್ರಾಮದವರ ಇಚ್ಚೆಯಂತೆ ಇಲ್ಲಿನ ಅಯ್ಯಪ್ಪ ಭಜನಾಂದಿರದಲ್ಲಿ ಭಜನೆಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಮಾಡಲಾಗಿದೆ. ಇಲ್ಲಿ ನಡೆಯುವ ಭಜನಾ ಕಾರ್ಯಕ್ರಮದಲ್ಲಿ ಗ್ರಾಮದ ಭಕ್ತಾದಿಗಳು ಭಾಗವಹಿಸುವ ಮೂಲಕ ಪುನೀತರಾಗಬೇಕಿದೆ. ಗ್ರಾಮಸ್ಥರ ನಿತ್ಯ ಒಡನಾಟದಿಂದ ಮಾತ್ರ ಯಾವುದೇ ಕ್ಷೇತ್ರಗಳು ಅಭಿವೃದ್ದಿಯಾಗಲು ಸಾಧ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಾಸು ಮಣಿಯಾಣಿ, ಭಜನಾಮಂದಿರದ ಕಾರ್ಯದರ್ಶಿಸಂತೋಷ್ ಪಾಂಡಿಯಡ್ಕ, ಪುಷ್ಪರಾಜ್, ಸದಾನಂದ ಮಣಿಯಾಣಿ ಸೇರಿದಂತೆ ಹಲವು ಮಂದಿ ಉಪಸ್ತಿತರಿದ್ದರು. ಬೆಳಿಗ್ಗೆ ಭಜನಾಮಂದಿರ ವಠಾರದಲ್ಲಿ ಧಾರ್ಮಿಕ ವಿದಿ ವಿಧಾನಗಳು ನಡೆಯಿತು.ಬೆಳಿಗ್ಗೆ ಗಣಹೋಮ, ಶ್ರೀ ಅಯ್ಯಪ್ಪ ಪೂಜೆ, ರಕ್ತೇಸ್ವರಿ ತಂಬಿಲ, ಸತ್ಯನಾರಾಯಣ ಪೂಜೆ ನಡೆಯಿತು. ಅರ್ಚಕರಾದ ಕಾವು ಮಂಜುನಾಥ ಐತಾಳ ಬಳಗದವರಿಂದ ಪೂಜಾ ಕಾರ್ಯಕ್ರಮಗಳು ನಡೆಯಿತು. ನಾಗೇಶ್ ಮಣಿಯಾಣಿ ಕುರಿಂಜ ಕೊಪ್ಪಳ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here