ಪುತ್ತೂರು: ಗೃಹೋಪಯೋಗಿ ವಸ್ತುಗಳ ಬೃಹತ್ ಮಳಿಗೆ `ಬಿಗ್ ಹೌಸ್’ ಉಪ್ಪಿನಂಗಡಿ ಹಳೆ ಬಸ್ಸ್ಟ್ಯಾಂಡ್ ಬಳಿಯ ಹಸನ್ ಟವರ್ಸ್ನಲ್ಲಿ ಶುಭಾರಂಭಗೊಂಡಿತು.
ಮಳಿಗೆಗೆ ಅಬ್ದುಲ್ ರಝಾಕ್ ಮಿಸ್ಬಾಹಿ ಕಳಿಯಾರ್, ಅಬ್ಬಾಸ್ ಸಹದಿ ಕೋಡಿ(ಪೆರ್ನೆ ಉಸ್ತಾದ್), ಅಬ್ದುಸ್ಸಲಾಂ ಫೈಝಿ ಯಡಪ್ಪಾಲ್, ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಅಬೂಬಕ್ಕರ್ ಮದನಿ ಕೂರ್ನಡ್ಕ, ಬಾದುಶಾ ಅಝ್ಹರಿ ಮೊದಲಾದವರು ಆಗಮಿಸಿ ಪ್ರಾರ್ಥನೆ ನೆರವೇರಿಸಿ ಶುಭ ಹಾರೈಸಿದರು. ಅಲ್ಲದೇ ಹಲವಾರು ಮಂದಿ ಗಣ್ಯರು, ಸಾರ್ವಜನಿಕರು ಮಳಿಗೆಗೆ ಭೇಟಿ ನೀಡಿ ಶುಭ ಹಾರೈಸಿದರು.
ಗಣ್ಯರನ್ನು ಸ್ವಾಗತಿಸಿದ ಬಿಗ್ ಹೌಸ್ನ ಮಾಲಕ ಹಾರಿಸ್ ಕೂರ್ನಡ್ಕ ಮಾತನಾಡಿ ನಮ್ಮಲ್ಲಿ ಡ್ರೆಸ್, ಚಪ್ಪಲಿಗಳು, ಬ್ಯಾಗ್, ಟಾಯ್ಸ್, ಹೌಸ್ಹೋಲ್ಡ್ ಸೇರಿದಂತೆ ವಿವಿಧ ಬಗೆಯ ಗೃಹೋಪಯೋಗಿ ವಸ್ತುಗಳು ಲಭ್ಯವಿದ್ದು ಗ್ರಾಹಕರ ಸಹಕಾರ ಬಯಸಿದರು.
೫೦% ಡಿಸ್ಕೌಂಟ್ ಆಫರ್
ಶುಭಾರಂಭದ ಪ್ರಯುಕ್ತ ಆಯ್ದ ವಸ್ತುಗಳಿಗೆ ೫೦% ಡಿಸ್ಕೌಂಟ್ ಆಫರ್ ಪ್ರಕಟಿಸಲಾಗಿದ್ದು ಜ.೨೦ರ ವರೆಗೆ ಮಾತ್ರ ಆಫರ್ ಲಭ್ಯವಿರಲಿದೆ.