ಮಹಾರಾಷ್ಟ್ರ: ಪುಣೆಯ ನೇತಾಜಿ ಸುಭಾಶ್ಚಂದ್ರ ಬೊಸ್ ಮಿಲಿಟರಿ ಸ್ಕೂಲ್ ಸ್ಟೇಡಿಯಂ ನಲ್ಲಿ ನಡೆದ ನ್ಯಾಷನಲ್ ಕರಾಟೆ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮೂಡಬಿದಿರೆಯ ಅಲ್ ಫುರ್ಖಾನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಅಪ್ಲಾ ಅಮನ್ ಶಾಫಿ 13 ವರ್ಷ ವಯೋಮಿತಿಯ 55 ಕೆಜಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಈ ಚಾಂಪಿಯನ್ ಶಿಪ್ ನಲ್ಲಿ ಭಾರತ ಸೇರಿದಂತೆ ನೇಪಾಳ, ಭೂತನ್, ಶ್ರೀಲಂಕಾ, ಬಾಂಗ್ಲ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅಮನ್ ಶಾಫಿ ಮಹಮ್ಮದ್ ನದೀಮ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.