ಬೆಂಗಳೂರು : ಅಮೂಲ್ ಮತ್ತು ನಂದಿನಿ ಒಂದಾಗಬೇಕೆಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆಗೆ ಒಟ್ಟಾರೆ ವಿರೋಧ ವ್ಯಕ್ತವಾಗುತ್ತಿರುವಂತೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗುಜರಾತಿನ ಅಮೂಲ್ ಜೊತೆ ಕೆಎಮ್ಎಫ್ ವಿಲೀನ ಮಾಡುವುದಿಲ್ಲ. ಇನ್ನು 100 ವರ್ಷ ಕಳೆದರೂ ಕೆಎಮ್ಎಫ್ ಹಾಗೆಯೇ ಇರುತ್ತದೆ. ಎಂದು ಹೇಳಿದ್ದಾರೆ. ಈ ನಡುವೆ ಕೆಎಮ್ಎಫ್ ಮತ್ತು ಅಮೂಲ್ ವಿಲೀನದ ಪ್ರಶ್ನೆಯೇ ಇಲ್ಲ. ವಿಲೀನದ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಮಾತನಾಡಿಲ್ಲ ಎಂದು ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯದಲ್ಲಿ ಅಮಿತ್ ಶಾ ಕೆಎಮ್ಎಫ್ ಮತ್ತು ಅಮೂಲ್ ಒಂದಾಗಬೇಕೆಂಬ ಹೇಳಿಕೆ ನೀಡಿದ ಬೆನ್ನಲ್ಲೇ ವಿಪಕ್ಷಗಳಿಂದ ಮತ್ತು ರೈತರಿಂದ ವಿರೋಧ ವ್ಯಕ್ತವಾಗಿತ್ತು.