ಮಾಸ್ಕೋ: ತನ್ನ ಮಾತೃಭೂಮಿಯ ರಕ್ಷಣೆ ಮಾಡಲು ಮತ್ತು ನನ್ನ ದೇಶವಾಸಿಗಳಿಗೆ ನಿಜವಾದ ಸ್ವಾತಂತ್ರ್ಯವನ್ನು ಖಾತರಿಪಡಿಸಲು ರಷ್ಯಾ ಉಕ್ರೇನ್ ವಿರುದ್ಧ ಹೋರಾಡುತ್ತಿದೆ ಎಂದು ರಷ್ಯಾದ ಸರಕಾರಿ ಟಿವಿ ವಾಹಿನಿಯಲ್ಲಿ ಪ್ರಸಾರವಾದ ಸಂದೇಶದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರತಿಪಾದಿಸಿದ್ದಾರೆ. ರಷ್ಯಾವನ್ನು ನಾಶಗೊಳಿಸಲು ಉಕ್ರೇನ್ ಅನ್ನು ಸಾಧನವಾಗಿ ಪಶ್ಚಿಮದ ರಾಷ್ಟ್ರಗಳು ಬಳಸಿಕೊಂಡಿದ್ದು, ಈ ಪ್ರಯತ್ನಗಳಿಗೆ ನಮ್ಮ ದೇಶ ಎಂದೂ ಮಣಿಯುವುದಿಲ್ಲ ಎಂದು ಪುಟಿನ್ ಹೇಳಿದ್ದಾರೆ.