ಅಂಕೋಲ: ರಾಷ್ಟ್ರೀಯ ಹೆದ್ದಾರೆ 66 ರ ಅಂಕೋಲದಲ್ಲಿ ಬಸ್ ಹಾಗೂ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಯಲ್ಲಾಪುರದಿಂದ ಅಂಕೋಲ ಕಡೆ ಬರುತ್ತಿದ್ದ ತಮಿಳುನಾಡಿನ ನೋಂದಣಿ ಹೊಂದಿದ್ದ ಕಾರು ಮತ್ತು ಅಂಕೋಲದಿಂದ ಹುಬ್ಬಳ್ಳಿಗೆ ಹೋಗುವ ಬಸ್ಸಿನ ನಡುವೆ ಡಿಕ್ಕಿ ಸಂಭವಿಸಿದೆ. ಗಾಯಾಳುವನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತು ಕೇಸು ದಾಖಲಾಗಿದೆ.