ಮಂಗಳೂರು: ನಗರದ ತಣ್ಣೀರುಬಾವಿ ಬೀಚ್ ಬಳಿ ವಾಹನ ಬ್ಲಾಕ್ ಆಗಿದ್ದ ಸಂದರ್ಭದಲ್ಲಿ ಅಲ್ಲಿದ್ದ ಯುವಕರ ಮೇಲೆ ಪೊಲೀಸರು ಲಾಟಿ ಚಾರ್ಜ್ ಮಾಡಿದ್ದು ಪೊಲೀಸರ ಅತಿರೇಕದ ವರ್ತನೆ ಎಂದು ಸ್ಥಳೀಯರು ಕಿಡಿ ಕಾರಿದ್ದಾರೆ. ಹೊಸ ವರ್ಷವಾದ್ದರಿಂದ ತಣ್ಣೀರಿಬಾವಿ ಬೀಚ್ಗೆ ಭೇಟಿ ಕೊಡುವವರ ಸಂಖ್ಯೆ ಜಾಸ್ತಿಯಾಗಿತ್ತು.
ಹೀಗಾಗಿ ರಸ್ತೆ ಬ್ಲಾಕ್ ಆಗಿತ್ತು. ಇದೇ ವೇಳೆ ಕ್ರಿಕೆಟ್ ಆಡಿ ಬೈಕ್ನಲ್ಲಿ ತೆರಳುತ್ತಿದ್ದ ಹುಡುಗರನ್ನು ಅಡ್ಡಗಟಗಟ್ಟಿದ ಪೊಲೀಸರು ನಿಮ್ಮಿಂದ ಬ್ಲಾಕ್ ಆಗಿದೆ ಎಂದು ಲಾಟಿ ಪ್ರಹಾರ ನಡೆಸಿದರು. ಆರನೇ ತರಗತಿ ವಿದ್ಯಾರ್ಥಿ ಮತ್ತು ಪಿ.ಯು. ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಟಿ ಬೀಸಿದ್ದು ಗರಂ ಆಗಿರುವ ಸ್ಥಳೀಯರು ಶಾಸಕ ವೇದವ್ಯಾಸ್ ಕಾಮತ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಲಾಟಿ ಬೀಸಿದ ಮೂರು ಪೊಲೀಸರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಂಭೀರವಾಗಿ ಗಾಯಗೊಂಡಿರುವ ೬ನೇ ಕ್ಲಾಸ್ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.