ನೆಲ್ಯಾಡಿ: ಜೆಸಿಐ ಕೊಕ್ಕಡ ಕಪಿಲಾ ಇದರ 3ನೇ ವರ್ಷದ 2023ನೇ ಸಾಲಿನ ಅಧ್ಯಕ್ಷ ಜಿತೇಶ್ ಎಲ್.ಪಿರೇರಾ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ’ಅಕ್ಷರ ದೀವಿಗೆ’ ಆರಂಭೋತ್ಸವ ಜ.4ರಂದು ಸಂಜೆ 6.30ಕ್ಕೆ ಕೊಕ್ಕಡ ಕೌಕ್ರಾಡಿ ಸಂತ ಜಾನರ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.
ಉಜಿರೆ ಶ್ರೀ ಧ.ಮಂ.ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ದಿವ ಕೊಕ್ಕಡರವರು ಅಕ್ಷರ ದೀವಿಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಲಯ 15ರ ವಲಯ ಉಪಾಧ್ಯಕ್ಷ ಭರತ್ ಶೆಟ್ಟಿ ಪದಗ್ರಹಣ ನೆರವೇರಿಸಲಿದ್ದಾರೆ. ವಲಯ 15ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೆಳ್ತಂಗಡಿ ಸಹಾಯಕ ಪ್ರಾಧ್ಯಾಪಕಿ ಡಾ.ಕುಶಾಲಪ್ಪ ಎಸ್., ಕೌಕ್ರಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಫಾಯಲ್ ಸ್ಟ್ರೆಲ್ಲಾ, ಜೇಸಿ ಹಿರಿಯ ಕೆ.ಯು.ಕರ್ಕೇರಾ, ಯಕ್ಷಗಾನ ಪ್ರತಿಭೆ ಚಂದನಾ ಆಚಾರ್ಯರವರಿಗೆ ಸನ್ಮಾನ ಹಾಗೂ ಕೌಕ್ರಾಡಿ ಸಂತ ಜಾನರ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಲಿದೆ ಜೆಸಿಐ ಕೊಕ್ಕಡ ಕಪಿಲಾ ಪ್ರಕಟಣೆ ತಿಳಿಸಿದೆ.