ನವದೆಹಲಿ: ನನ್ನ ಪರಿಸರವು ನನ್ನನ್ನು ಮಹಾತ್ಮಾಗಾಂಧೀಜಿಯವರ ಕಟು ಠೀಕಾಕಾರನನ್ನಾಗಿ ಮಾಡಿತ್ತು. ನನ್ನ ನಿರ್ಮಾಣದ ಹೇರಾಂ ಚಿತ್ರವು ಮಹಾತ್ಮಾಗಾಂಧಿಯವರೊಂದಿಗೆ ಕ್ಷಮೆಯಾಚಿಸುವ ಮಾರ್ಗವಾಗಿತ್ತು ಎಂದು ನಟ, ರಾಜಕಾರಣಿ ಕಮಲಹಾಸನ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ ನಂತರ ರಾಹುಲ್ ಜೊತೆಗಿನ ಸಂಭಾಷಣೆಯ ವೇಳೆ ಈ ಮಾಹಿತಿಯನ್ನು ಕಮಲ್ ಹಂಚಿಕೊಂಡಿದ್ದು ರಾಹುಲ್ ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ.