ಮೂಲ್ಕಿ: ಕಂಬಳ ಓಟಗಾರ ಕಂಬಳದ ಕೆರೆಯಲ್ಲಿ ಬಿದ್ದರೂ ಕೋಣದ ಹಗ್ಗ ಬಿಡದೆ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದ ಕುತೂಹಲಕಾರಿ ಘಟನೆ ಮೂಲ್ಕಿ ಸೀಮೆ ಅರಸು ಜೋಡುಕರೆ ಕಂಬಳದಲ್ಲಿ ನಡೆದಿದೆ. ಹಗ್ಗಹಿರಿಯ ವಿಭಾಗದ ಫೈನಲ್ ಹಣಾಹಣಿಯಲ್ಲಿ ನಂದಳಿಕೆ ಕೋಣವನ್ನು ಓಡಿಸಿದ ಬಂಬ್ರಾಣಬೈಲು ವಂದಿತ್ ಶೆಟ್ಟಿ ಪ್ರಥಮ ಸ್ಥಾನ ಪಡೆದು ಚಿನ್ನ ಗೆದ್ದ ಸಾಧಕ.
ನಂದಳಿಕೆ ಶ್ರೀಕಾಂತ್ ಭಟ್ ಬಿ ಮತ್ತು ಪದವು ಕಾನಡ್ಕ ಫ್ಲೇವಿ ಡಿಸೋಜಾ ರವರ ಕೋಣಗಳ ನಡುವೆ ಸ್ಪರ್ಧೆಯ ವೇಳೆ ಈ ಘಟನೆ ನಡೆದಿದೆ.