ನವದೆಹಲಿ :ಹೊಸ ವರ್ಷದ ಮೊದಲ ದಿನ ದೆಹಲಿಯಲ್ಲಿ ಕಾರು ಮತ್ತು ಸ್ಕೂಟರ್ ಡಿಕ್ಕಿಯಾಗಿ ಕಾರಿನ ಚಕ್ರದಡಿ ಸಿಲುಕಿ ಕಿಲೋಮೀಟರ್ಗಟ್ಟಲೆ ದೂರ ಎಲೆದೊಯ್ದು ಯುವತಿಯನ್ನು ಬಲಿ ಪಡೆದ ಘಟನೆಗೆ ಸಂಬಂಧಿಸಿದಂತೆ ಬಂದಿತ ಆರೋಪಿಗಳ ಪೈಕಿ ಒಬ್ಬಾತ ಬಿಜೆಪಿ ಸದಸ್ಯನಾಗಿದ್ದಾನೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಆಪ್ ನ ಮುಖ್ಯ ವಕ್ತಾರ ಸೌರಭ್ ಭಾರದ್ವಜ್ ಪ್ರಕರಣದಲ್ಲಿ ಬಂಧಿತರಾಗಿರುವ ಐದು ಮಂದಿ ಆರೋಪಿಗಳಲ್ಲಿ ಒಬ್ಬನಾದ ಮನೋಜ್ ಮಿತ್ತಲ್ ಬಿಜೆಪಿ ಸದಸ್ಯನಾಗಿದ್ದಾನೆ ದಿಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಕಾರಿಗಳು ಉದ್ದೇಶ ಪೂರ್ವಕವಾಗಿ ಇದನ್ನು ಮರಮಾಚಿದ್ದಾರೆ. ಎಂದು ಸೌರಭ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದೀಪ್ ಖನ್ನ, ಅಮಿತ್ ಖನ್ನ, ಕೃಷ್ಣ, ಮಿಥುನ್ ಮತ್ತು ಮನೋಜ್ ಮಿತ್ತಲ್ ಎಂಬವರನ್ನು ಬಂಧಿಸಿದ್ದರು.