ಬೆಂಗಳೂರು: ಅಗತ್ಯ ಕಾರ್ಯ ಭಾರವಿಲ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 23 ಪ್ರಾಧ್ಯಾಪಕರನ್ನು ಕಾರ್ಯ ಭಾರವಿರುವ ಕಾಲೇಜುಗಳಿಗೆ ಹುದ್ದೆ ಸಹಿತ ವರ್ಗಾವಣೆ ಮಾಡಿ ಸರಕಾರ ಆದೇಶ ನೀಡಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚು ಕಾರ್ಯಭಾರವಿರುವ ಕಾಲೇಜುಗಳಿಗೆ ಪ್ರಾಧ್ಯಾಪಕರನ್ನು ಹುದ್ದೆ ಸಹಿತ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.