ಪುಣೆ: ಎರವಾಡ ಸೆಂಟ್ರಲ್ ಜೈಲ್ನಲ್ಲಿದ್ದ 3 ವಿಚಾರಣಾಧೀನ ಖೈದಿಗಳು ಡಿ.31ರಂದು ಇಲ್ಲಿನ ಸಸೂನ್ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಕುಟುಂಬ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೂವರು ಖೈದಿಗಳ ಪೈಕಿ ಓರ್ವ ಎಚ್ಐವಿ ಪಾಸಿಟಿವ್ ಆಗಿದ್ದರೆ ಇನ್ನೋರ್ವ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ. ಮೂರನೇ ಖೈದಿ ಹೃದಯ ಸಂಬಂಧಿ ಕಾಯಿಲೆಯಿತ್ತು ಎಂದು ಇಲ್ಲಿನ ಪೊಲೀಸ್ ಅಧಿಕಾರಿ ಅಶೋಕ್ ಕಾಟೆ ತಿಳಿಸಿದ್ದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಈ ಹೇಳಿಕೆಯನ್ನು ತಿರಸ್ಕರಿಸಿರುವ ಮೃತರ ಕುಟುಂಬ ಸಾವಿನ ಕಾರಣದ ಕುರಿತು ವಿಚಾರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.