ರಾಮಕುಂಜ ಪದವಿ ಕಾಲೇಜಿನಲ್ಲಿ’ ಕನಕ ಚಿಂತನ’ ಉಪನ್ಯಾಸ

0

* ಜಾಗತೀಕರಣ ನಮ್ಮ ಸಾಂಸ್ಕೃತಿಕ ಸಮೃದ್ಧಿಯನ್ನು ಹಾಳುಗೆಡವಿತೇ: ಟಿ.ಎ.ಎನ್.ಖಂಡಿಗೆ

ರಾಮಕುಂಜ: ಜಾಗತೀಕರಣ ನಮ್ಮ ಸಾಂಸ್ಕೃತಿಕ ಸಮೃದ್ಧಿಯನ್ನು ಹಾಳುಗೆಡವಿತೇ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಟಿ.ಎ.ಎನ್.ಖಂಡಿಗೆ ಪ್ರಶ್ನಿಸಿದರು.


ಅವರು ಮಂಗಳೂರು ವಿಶ್ವ ವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರ ಹಾಗೂ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜು ಆಶ್ರಯದಲ್ಲಿ ಜಂಟಿಯಾಗಿ ಆಯೋಜಿಸಿದ ಕನಕ ಚಿಂತನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು. ಕನಕ ಸಾಹಿತ್ಯದ ಜೊತೆಗೆ ವಚನ ಸಾಹಿತ್ಯದ ಮೌಲ್ಯಗಳ ಕುರಿತು ಅವರು ತೌಲನಿಕವಾಗಿ ಮಾತನಾಡಿದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ಅವರು ಅಧ್ಯಕ್ಷತೆ ವಹಿಸಿದ್ದರು.

ಅಧ್ಯಯನ ಪೀಠದ ಸಂಯೋಜಕ ಡಾ| ಧನಂಜಯ ಕುಂಬ್ಳೆ ಅವರು ಕನಕ ತತ್ವಗಳು ಸ್ವಸ್ಥ ಸಮಾಜಕ್ಕೆ ಎಷ್ಟು ಅವಶ್ಯಕ ಎಂಬುದನ್ನು ವಿವರಿಸಿದರು. ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೇಸಪ್ಪ ರೈ, ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಂದರ ಶೆಟ್ಟಿ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಿಗೆ ಸ್ಪರ್ಧೆ:
ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಪ್ರಜ್ಞೆಯ ಬಗ್ಗೆ ಪ್ರಬಂಧ ಹಾಗೂ ಕನಕ ಕೀರ್ತನ ಗಾಯನ ಸ್ಪರ್ಧೆಗಳನ್ನು ಪದವಿ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ಶಿವಪ್ರಸಾದ್ ವಂದಿಸಿದರು. ಉಪನ್ಯಾಸಕಿ ಜಯಶ್ರೀ ನಿರೂಪಿಸಿದರು. ಅದಿತಿ ಪ್ರಾರ್ಥಿಸಿದರು. ರೇವತಿ ಸಹಕರಿಸಿದರು. ಕಾರ್ಯಕ್ರಮದ ಅಂಗನವಾಗಿ ಶ್ರೀ ಶಾರದಾಂಬ ಭಜನಾ ಮಂಡಳಿಯ ಮಹಿಳೆಯರಿಂದ ನೃತ್ಯ ಸಂಕೀರ್ತನ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here