ಪೆರಾಬೆ: ರಸ್ತೆ ಕಾಂಕ್ರಿಟೀಕರಣಕ್ಕೆ ಸಚಿವ ಎಸ್.ಅಂಗಾರ ಗುದ್ದಲಿ ಪೂಜೆ

0

ನೆಲ್ಯಾಡಿ: ಪೆರಾಬೆ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯುವ ವಿವಿಧ ರಸ್ತೆಗಳ ಕಾಂಕ್ರಿಟೀಕರಣ ಕಾಮಗಾರಿಗೆ ಸುಳ್ಯ ಶಾಸಕರೂ ಆಗಿರುವ ಸಚಿವ ಎಸ್.ಅಂಗಾರ ಅವರು ಜ.3 ರಂದು ಗುದ್ದಲಿ ಪೂಜೆ ನೆರವೇರಿಸಿದರು. ಇದೇ ವೇಳೆ ಕಾಂಕ್ರಿಟೀಕರಣಗೊಂಡ ರಸ್ತೆಗಳ ಉದ್ಘಾಟನೆ ನೆರವೇರಿಸಿದರು.


ತಲಾ 10 ಲಕ್ಷ ರೂ.,ಅನುದಾನದಲ್ಲಿ ನಡೆದ ಪೂಂಜ-ಮರುವಂತಿಲ ರಸ್ತೆ ಕಾಂಕ್ರಿಟೀಕರಣ ಹಾಗೂ ಮನವಳಿಕೆ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಸಚಿವ ಎಸ್.ಅಂಗಾರ ಉದ್ಘಾಟಿಸಿದರು. 25 ಲಕ್ಷ ರೂ.ಅನುದಾನದಲ್ಲಿ ನಡೆಯುವ ಸುರುಳಿ-ಕೆಮ್ಮಿಂಜೆ ರಸ್ತೆ ಕಾಂಕ್ರಿಟೀಕರಣಕ್ಕೆ ಹಾಗೂ 40 ಲಕ್ಷ ರೂ.,ಅನುದಾನದಲ್ಲಿ ನಡೆಯುವ ಕುಂತೂರು-ಮಾಪಲ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಸಚಿವ ಎಸ್.ಅಂಗಾರ ಅವರು ಗುದ್ದಲಿ ಪೂಜೆ ನೆರರವೇರಿಸಿದರು. 30 ಲಕ್ಷ ರೂ.ಅನುದಾನದಲ್ಲಿ ನಡೆಯುವ ಇಡಾಲ-ಕುಂಟ್ಯಾನ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೂ ಗುದ್ದಲಿ ಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಕೃಷ್ಣ ಶೆಟ್ಟಿ ಕಡಬ, ಸುಳ್ಯ ಮಂಡಲದ ಎಸ್‌ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ್ ಶಾಂತಿಗುರಿ, ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಟ್ರುಪ್ಪಾಡಿ, ಪೆರಾಬೆ ಗ್ರಾ.ಪಂ.ಅಧ್ಯಕ್ಷ ಮೋಹನದಾಸ್ ರೈ ಪರಾರಿ, ಉಪಾಧ್ಯಕ್ಷೆ ಸಂಧ್ಯಾ, ಪಿಡಿಒ ಶಾಲಿನಿ, ಪೆರಾಬೆ ಶಕ್ತಿ ಕೇಂದ್ರದ ಪ್ರಮುಖರಾದ ಜನಾರ್ದನ ಶೆಟ್ಟಿ ಕಲ್ಲಡ್ಕ, ಬೂತ್ ಸಮಿತಿ ಅಧ್ಯಕ್ಷರಾದ ಲಕ್ಷ್ಮೀಶ ಶೆಟ್ಟಿ ಸುರುಳಿ, ಸುಭೀಕ್ಷರತ್ನ ರೈ ಗುತ್ತುಪಾಲು, ಸದಾನಂದ ಕುಂಟ್ಯಾನ, ವಸಂತ ಗೌಡ ಇಡಾಳ, ಪೆರಾಬೆ ಗ್ರಾ.ಪಂ.ಸದಸ್ಯರು, ಸುಳ್ಯ ಮಂಡಲದ ಸಾಮಾಜಿಕ ಜಾಲತಾಣದ ಸದಸ್ಯರಾದ ರಮೇಶ್ ರೈ ಸುರುಳಿ ಮತ್ತಿತರರು ಉಪಸ್ಥಿತರಿದ್ದರು.

ಪೆರಾಬೆ ಗ್ರಾಮದ ಮನವಳಿಕೆ ದಿ.ಕರಿಯಪ್ಪ ರೈಯವರ ಪುತ್ರ ಶ್ಯಾಮ್ ಪ್ರಸಾದ್ ರೈಯವರ ಮನೆಗೆ ಭೇಟಿ ನೀಡಿದ ಸಚಿವ ಎಸ್.ಅಂಗಾರ ಅವರು ಯೋಗಕ್ಷೇಮ ವಿಚಾರಿಸಿದರು.


ನೆಟ್‌ವರ್ಕ್ ಸಮಸ್ಯೆ; ಸಚಿವರಿಗೆ ಮನವಿ
ಪೆರಾಬೆ ಗ್ರಾಮದ ಸುರುಳಿ, ಕೆಮ್ಮಿಂಜೆ, ಮಾಪಲ, ಮನವಳಿಕೆ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ. ಗ್ರಾಮದಲ್ಲಿ ಸಂಚಾರಿ ಪಡಿತರ ಬರುವುದರಿಂದ ಮೊಬೈಲ್‌ಗಳಿಗೆ ಒಟಿಪಿ, ಬಯೋಮೆಟ್ರಿಕ್‌ಗೆ ನೆಟ್‌ವರ್ಕ್ ಇಲ್ಲದ ಕಾರಣದಿಂದ ಪಡಿತರ ಸರಿಯಾಗಿ ದೊರೆಯುತ್ತಿಲ್ಲ. ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿದರೂ ಯಾವುದೇ ಪರಿಹಾರ ದೊರೆತಿಲ್ಲ. ಆದ್ದರಿಂದ ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ಸ್ಪಂದನೆ ನೀಡುವಂತೆ ಜನಸ್ಪಂದನ ಸಮಿತಿ ಸುರುಳಿ ಇದರ ವತಿಯಿಂದ ಸಚಿವ ಎಸ್.ಅಂಗಾರ ಅವರಿಗೆ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here