ಬೆಂಗಳೂರು :ಜನಗಣತಿಯ ಆದಾರದ ಮೇಲೆ ರಾಜ್ಯದ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯುತ್ ಗಳ ಗಡಿಯನ್ನು ಗುರುತಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಲು ಅಗತ್ಯ ಸಂಖ್ಯೆಯನ್ನು ನಿಗದಿ ಪಡಿಸಿದ ಸರ್ಕಾರದ ಸೀಮಾ ನಿರ್ಣಯ ಆಯೋಗ ಸರಕಾರಕ್ಕೆ ವರದಿ ಮಂಡನೆ ಮಾಡಿದ್ದು ಸಾರ್ವಜನಿಕರಿಂದ ಆಕ್ಷೇಪಣಾ ಅರ್ಜಿ ಆಹ್ವಾನಿಸಿದೆ, ಸದ್ಯ ತಾ.ಪಂ ಮತ್ತು ಜಿ.ಪಂ ಗೆ ಸಂಬಂಧಿಸಿದ ಕ್ಷೇತ್ರ ಮರುವಿಂಗಡನಾ ಮಾಹಿತಿ ಬಹಿರಂಗ ಪಡಿಸಲಾಗಿದ್ದು ಪ್ರತೀ ಕ್ಷೇತ್ರದ ವ್ಯಾಪ್ತಿ ಮತ್ತು ಗ್ರಾಮಗಳ ವಿವರಣೆ ಇರಲ್ಲಿದೆ.
ಈ ಬಗ್ಗೆ ಯಾವುದೇ ಆಕ್ಷೇಪಗಳಿದಲ್ಲಿ ಜನವರಿ 16ರ ಸಂಜೆ 5 ಘಂಟೆಯೊಳಗೆ ಆಕ್ಷೇಪನಾ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ತಿಳಿಸಿದೆ