ಬೆಂಗಳೂರು : ಪೇಪರ್ ರಹಿತ ಯೋಜನೆಯ ಸುಧಾರಣಾ ಕ್ರಮಕ್ಕಾಗಿ ಮೋದಿ ಸರಕಾರ ಅನುದಾನ ನೀಡಲು ಮುಂದಾದರು ಅದನ್ನು ಕಡೆಗಣಿಸಿ ಪರ್ಯಾಯ ಯೋಜನೆಗೆ ಮುಂದಾಗಿರುವ ರಾಜ್ಯದ ಬಿಜೆಪಿ ಸರಕಾರದ ವಿರುದ್ದ ಹೈಕೊರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ರಾಜ್ಯ ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ಮಾಜಿ ಶಾಸಕ ರಮೇಶ್ ಬಾಬು ಈ ಪಿ ಐ ಎಲ್ ಸಲ್ಲಿಸಿದ್ದು ಅರ್ಜಿಯನ್ನು ಪರಿಗಣಿಸಿರುವ ಹೈಕೊರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ವಿಧಾನ ಮಂಡಲದಲ್ಲಿ 253ಕೋ.ರೂ ವೆಚ್ಚದಲ್ಲಿ ಕಾಗದ ರಹಿತ ವ್ಯವಸ್ಥೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಕೇಂದ್ರ ಸರಕಾರದ ಮಹತ್ವದ ಯೋಜನೆಯನ್ನು ಕಡೆಗಣಿಸಿ, ಕೇಂದ್ರದ ಅನುದಾನವನ್ನು ನಿರಾಕರಿಸಿ ಈ ಯೋಜನೆಯನ್ನು ಜಾರಿ ಮಾಡಲು ಹೊರಟಿರುವ ರಾಜ್ಯ ಸರಕಾರದ ಕ್ರಮ ಸರಿಯಲ್ಲ ಎಂದು ರಮೇಶ್ ಬಾಬು ಹೈ ಕೋರ್ಟಿನ ಗಮನ ಸೆಳೆದಿದ್ದಾರೆ. ಈ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.