ಮೈಸೂರು :ಮೈಸೂರಿನ ಒಡನಾಡಿ ಸಂಸ್ಥೆಯಿಂದ ಮತ್ತೋಂದು ಲೈಂಗಿಕ ಪ್ರಕರಣ ಬೆಳಕಿಗೆ ಬಂದಿದೆ. ದಲಿತ ಯುವತಿಯೋರ್ವಳ ಮೇಲೆ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ಕೆ ಎಸ್ ಎಂಬಾತ ಅತ್ಯಾಚಾರ, ವಂಚನೆ, ಕ್ರೀಮಿನಲ್ ಪಿತೂರಿ ನಡೆಸಿದ್ದಾನೆ. ಆತನನ್ನು ಬಂಧಿಸಿ ಸಮಗ್ರ ತನಿಖೆ ನಡೆಸಬೇಕು ಆತನ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಸರಕಾರದ ಸಚೀವರುಗಳ ಮತ್ತು ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಆರೋಪಿ ಸ್ಯಾಂಟದರೋ ರವಿ ವಿರುದ್ದ ವರದಕ್ಷಿಣೆ ನಿಷೇಧ ಕಾಯ್ದೆ, ಎಸ್ ಸಿ ಎಸ್ಟಿ ದೌರ್ಜನ್ಯ ನಿಷೇಧ ಕಾಯ್ದೆ, ಲೈಂಗಿಕ ಕಿರುಕುಳ, ವಂಚನೆ, ಅತ್ಯಾಚಾರ ಸಂಬಂಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಸ್ಯಾಂಟ್ರೋ ರವಿ ಉದ್ಯೋಗ ಕೊಡಿಸುವ ನೆಪದಲ್ಲಿ ನನ್ನನ್ನು ಕರೆಸಿ, ಜ್ಯೂಸ್ ಕುಡಿಸಿ ಪ್ರಜ್ಙೆ ಕಳೆಸದುಕೊಂಡ ಬಳಿಕ ಅತ್ಯಾಚಾರ ಮಾಡಿದ್ದ, ನನ್ನ ನಗ್ನ ಪೊಟೋ ತೆಗೆದು ಬೆದರಿಕೆ ಹಾಕಿದ್ದ ಬಳಿಕ ಬಲವಂತವಾಗಿ ವಿವಾಹವಾಗಿದ್ದ, ಮದುವೆಯ ಬಳಿಕವು ಸಾಕಷ್ಟು ಹಿಂಸೆ ನೀಡಿದ್ದಾನೆ, ಎಂದು ಸಂತ್ರಸ್ಥೆ ದೂರಿನಲ್ಲಿ ಆರೋಪಿಸಿದ್ದಾರೆ. ಕ್ರಿಮಿನಲ್ ಹಿನ್ನಲೆಯ ಸ್ಯಾಂಟ್ರೋ ರವಿ ಜತೆ ಗೃಹ ಸಚಿವರು ಸೇರಿದಂತೆ ಹಲವು ಸಚಿವರು ಸಲುಗೆಯಿಂದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ನಿವೃತ್ತ ಐ ಎ ಎಸ್ ಅಧಿಕಾರಿಗಳು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಈತನ ಕೃತ್ಯಗಳಿಗೆ ಬೆಂಬಲ ನೀಡುತ್ತಿರುವುದಾಗಿ ಬಿಇ ಪದವೀಧರೆ ಸಂತ್ರಸ್ಥೆ ಯುವತಿ ಬಹಿರಂಗ ಪಡಿಸಿದ್ದಾರೆ.