ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜ. 30 ಹಾಗೂ ಜ. 31 ರಂದು ನಡೆಯಲಿರುವ ’ಶ್ರೀ ಒಡಿಯೂರು ರಥೋತ್ಸವ-ತುಳುನಾಡ ಜಾತ್ರೆ ಹಾಗೂ ೨೩ನೇ ತುಳು ಸಾಹಿತ್ಯ ಸಮ್ಮೇಳನ’ದ ಅಂಗವಾಗಿ ತುಳುನಾಡಿನ ಸಾಂಸ್ಕೃತಿಕ, ಕಲಾ, ನೃತ್ಯತಂಡಗಳಿಗೆ ’ತುಳು ಜಾನಪದ ನಲಿಕೆ-ತೆಲಿಕೆ ಪಂತೊ’ ಸ್ಪರ್ದೆಯನ್ನು ಜ. 30 ರಂದು ಮಧ್ಯಾಹ್ನ 1 .30 ರಿಂದ ಸಂಜೆ 5.30ರ ವರೆಗೆ ಏರ್ಪಡಿಸಲಾಗಿದೆ. ಎಲ್ಲ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಪ್ರಥಮ ಬಹುಮಾನ 20ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿಪತ್ರ,
ದ್ವಿತೀಯ ಬಹುಮಾನ 15 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ,
ತೃತೀಯ ಬಹುಮಾನ 10 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ವನ್ನು ವಿಜೇತ ತಂಡಗಳಿಗೆ ಅದೇ ದಿನ ಸಾಯಂಕಾಲ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು.
ಸ್ಪರ್ಧೆಯಲ್ಲಿ ತುಳು ಜಾನಪದ ಸಾಂಪ್ರದಾಯಿಕ ನಲಿಕೆ ಕಡ್ಡಾಯ. ತುಳು ಬಾಷೆ-ಸಂಸ್ಕೃತಿದ ಪೊರ್ಲು ತಿರ್ಲ್ ಪ್ರಸ್ತುತಿಗೆ ಅವಕಾಶ. ಪ್ರದರ್ಶನದ ಅವಧಿ 20 ನಿಮಿಷ. ಜಾನಪದ ವಾದ್ಯ ಪರಿಕರಗಳನ್ನೇ ಬಳಸಬೇಕು. ಧ್ವನಿಮುದ್ರಿಕೆ ಬಳಸುವಂತಿಲ್ಲ.
ಗುತ್ತಿನ ಮನೆಯ ಅಂಗಳದಲ್ಲಿ ಪ್ರಸ್ತುತಪಡಿಸುವಂತೆ ಪ್ರದರ್ಶನ ನೀಡಬೇಕು. ತಂಡದಲ್ಲಿ ಕನಿಷ್ಠ 10 ಮಂದಿ ಇರಬೇಕು. ಜಾತಿ, ಧರ್ಮ, ದೈವ ನಿಂದನೆಗೆ ಅವಕಾಶವಿಲ್ಲ. ಆಯ್ಕೆಯಾದ ತಂಡಗಳಿಗೆ ಮಾತ್ರ ಸ್ಪರ್ಧೆಗೆ ಅವಕಾಶ. ಸ್ಪರ್ಧೆಯ ವಿಚಾರದಲ್ಲಿ ಸಂಘಟಕರ ನಿರ್ಣಯವು ಅಂತಿಮವಾಗಿರುತ್ತದೆ.
ತಂಡದ ಹೆಸರು, ಪೂರ್ಣ ವಿಳಾಸ, ನೃತ್ಯದ ವಿವರ, ಕಲಾವಿದರ ಸಂಖ್ಯೆ ಮುಂತಾದ ವಿವರಗಳಿರುವ ಅರ್ಜಿಯನ್ನು ಜ. 14ಕ್ಕೆ ಮುಂಚಿತವಾಗಿ ಕಳಿಸತಕ್ಕದ್ದು. ತಮ್ಮ ಅರ್ಜಿಯನ್ನು ಸಂಯೋಜಕರು
’ತುಳು ಜಾನಪದ ನಲಿಕೆ-ತೆಲಿಕೆ ಪಂತೊ’
ತುಳು ಸಾಹಿತ್ಯ ಸಮ್ಮೇಳನ ಸಮಿತಿ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್,
ಅಂಚೆ: ಒಡಿಯೂರು-574243 ಗೆ ಕಳುಹಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9480760799, 9448123061ನ್ನು ಸಂಪರ್ಕಿಸಬಹುದೆಂದು ಕಾರ್ಯಕ್ರಮದ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.