‘ಜೇಸಿಐ ಆಲಂಕಾರು’ 2023ನೇ ಘಟಕದ ಪದಗ್ರಹಣ

0

ಸಾವಿರಾರು ಜನರ ಬಾಳಿಗೆ ಜೇಸಿಐ ದಾರಿದೀಪ: ಎ.ವಿ.ನಾರಾಯಣ

ಆಲಂಕಾರು: ಜೇಸಿಐ ಆಲಂಕಾರು ಇದರ 2023 ನೇ ಸಾಲಿನ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.4ರಂದು ಸಂಜೆ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಿನಿ ಹಾಲ್‌ನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಪುತ್ತೂರು ಎವಿಜಿ ಎಸೋಸಿಯೇಟ್ಸ್‌ನ ಸಿವಿಲ್ ಇಂಜಿನಿಯರ್ ಎ.ವಿ.ನಾರಾಯಣ ಅವರು ಮಾತನಾಡಿ, ಹಾದಿ ತಪ್ಪುತ್ತಿರುವ ಯುವ ಜನತೆಯನ್ನು ಸರಿದಾರಿಗೆ ತರುವ ಕೆಲಸವನ್ನು ಜೇಸಿಐ ಅಂತರಾಷ್ಟ್ರೀಯ ಸಂಸ್ಥೆ ಕಳೆದ ಒಂದು ಶತಕಗಳಿಂದ ಮಾಡುತ್ತಿದೆ. ಜೇಸಿಐ ಆಲಂಕಾರು ಗ್ರಾಮೀಣ ಭಾಗದಲ್ಲಿ ಇದಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು. ಹಿಂದೆ ಕೇವಲ ವ್ಯಕ್ತಿತ್ವ ವಿಕಸನಕ್ಕೆ ಸೀಮಿತವಾಗಿದ್ದ ಜೇಸಿಐ ಈಗ ಸಾಮಾಜಿಕ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿದ್ದು ಸಾವಿರಾರು ಜನರ ಬಾಳಿಗೆ ದಾರಿ ದೀಪವಾಗಿದೆ ಎಂದು ಎ.ವಿ.ನಾರಾಯಣ ಹೇಳಿದರು.


ಇನ್ನೋರ್ವ ಅತಿಥಿ ಜೆಸಿಐ ಭಾರತದ ವಲಯ 15 ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ಮಾತನಾಡಿ, ಜೇಸಿಐ ಭಾರತದ ಪ್ರತಿಷ್ಠಿತ ಘಟಕಗಳಲ್ಲಿ ಜೇಸಿಐ ಆಲಂಕಾರು ಸಹ ಒಂದಾಗಿದೆ. ಈ ಘಟಕ ನೂರಾರು ನಾಯಕರನ್ನು ಸಮಾಜಕ್ಕೆ ನೀಡುತ್ತಿದೆ. ಭವಿಷ್ಯದಲ್ಲಿ ಜೇಸಿಐ ಆಲಂಕಾರಿನ ಮೂಲಕ ಓರ್ವ ವಲಯಾಧ್ಯಕ್ಷರು ಆಗುವ ಕಾಲ ಆದಷ್ಟು ಬೇಗ ಕೂಡಿ ಬರಲಿ ಎಂದು ಹೇಳಿ ಶುಭಹಾರೈಸಿದರು. ವಲಯ ಉಪಾಧ್ಯಕ್ಷರು, ಜೇಸಿಐ ಆಲಂಕಾರಿನ 2022ನೇ ಸಾಲಿನ ಅಧ್ಯಕ್ಷ ಅಜಿತ್ ಕುಮಾರ್ ರೈಯವರು ವರದಿ ವಾಚಿಸಿ, ತನಗೆ ಸಹಕರಿಸಿದ ಜೇಸಿಐ ಆಲಂಕಾರಿನ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.


ಪದಪ್ರಧಾನ:
2023ನೇ ಸಾಲಿನ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಜೇಸಿರೆಟ್ ಅಧ್ಯಕ್ಷೆ ಜಯಶ್ರೀ ಅಲೆಪ್ಪಾಡಿ, ಕಾರ್ಯದರ್ಶಿ ಮಹೇಶ್ ಪಾಟಾಳಿ, ಜೆಜೆಸಿ ಅಧ್ಯಕ್ಷ ವಿಖಿತ್ ಜಿ.ಕೆ.ಹಾಗೂ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಪದಸ್ವೀಕರಿಸಿ ಮಾತನಾಡಿದ ಸಿವಿಲ್ ಇಂಜಿನಿಯರ್ ಆಗಿರುವ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಅವರು, ಕಳೆದ ೧೩ ವರ್ಷಗಳಿಂದ ಬಲಿಷ್ಠ ಸಂಸ್ಥೆಯಾಗಿ ರೂಪುಗೊಂಡಿರುವ ಜೇಸಿಐ ಆಲಂಕಾರು ಘಟಕವನ್ನು 2023ನೇ ಸಾಲಿನಲ್ಲಿ ಪ್ರಾಮಾಣಿಕವಾಗಿ ಮುನ್ನಡೆಸಲು ಎಲ್ಲಾ ಸದಸ್ಯರ ಹಾಗೂ ಊರ ಅಭಿಮಾನಿಗಳ ಸಹಕಾರ ಯಾಚಿಸಿದರು. ವಲಯ ತರಬೇತಿ ವಿಭಾಗದ ನಿರ್ದೇಶಕ ಪ್ರದೀಪ್ ಬಾಕಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪೂರ್ವಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಪವನ್‌ಕುಮಾರ್ ಜೇಸಿವಾಣಿ ವಾಚಿಸಿದರು. ಅಜಿತ್‌ಕುಮಾರ್ ರೈ ಸ್ವಾಗತಿಸಿದರು. ಜೇಸಿಐ ಸದಸ್ಯರಾದ ನಾರಾಯಣ ನೆಕ್ಕರೆ, ಹರಿಶ್ಚಂದ್ರ ಕೆ., ಗುರುಕಿರಣ್ ಶೆಟ್ಟಿ, ಬಾಲಕೃಷ್ಣ ಕೇಪುಳು ಅತಿಥಿಗಳನ್ನು ಪರಿಚಯಿಸಿದರು.

ಲತನ್‌ಕುಮಾರ್ ರೈ ಹೊಸ ಸದಸ್ಯರನ್ನು ಪರಿಚಯಿಸಿದರು. 9 ಮಂದಿ ನೂತನ ಸದಸ್ಯರು ಸೇರ್ಪಡೆಗೊಂಡರು. ಚೇತನ್ ಮೊಗ್ರಾಲ್, ಗಣೇಶ್ ಕಟ್ಟಪುಣಿ, ಮಮತಾ ಅಂಬರಾಜೆ, ಜ್ಯೋತಿಕಾ ರೈ ಸಹಕರಿಸಿದರು. ನೂತನ ಕಾರ್ಯದರ್ಶಿ ಮಹೇಶ್ ಪಾಟಾಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಊರ ಜೇಸಿ ಅಭಿಮಾನಿಗಳು, ಜೇಸಿಯ ಬೇರೆ ಬೇರೆ ಘಟಕಗಳ ಪದಾಧಿಕಾರಿಗಳು, ವಲಯಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಜೇಸಿಐ ಆಲಂಕಾರಿನ ಸದಸ್ಯರಾದ ಮೆಸ್ಕಾಂ ಆಲಂಕಾರು ಶಾಖಾ ಜೂನಿಯರ್ ಇಂಜಿನಿಯರ್ ಪ್ರೇಮ್‌ಕುಮಾರ್, ಅಗಮ್ಯ ಪ್ರೇಮ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪದಗ್ರಹಣ ಸಮಾರಂಭಕ್ಕೆ ಮೊದಲು ಜೇಸಿಐ ಆಲಂಕಾರು ಘಟಕದ ನೇತೃತ್ವದಲ್ಲಿ ಕುಂತೂರಿನಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಬಸ್ ತಂಗುದಾಣಕ್ಕೆ ಗುದ್ದಲಿ ಪೂಜೆಯನ್ನು ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ನೆರವೇರಿಸಿದರು.

LEAVE A REPLY

Please enter your comment!
Please enter your name here