ಕಡಬ: ಕೊಂಬಾರು ಗ್ರಾಮ ಪಂಚಾಯತ್ ನ ಕಚೇರಿ ಸಮೀಪದಲ್ಲಿ ಸಂಜೀವಿನಿ ಕಟ್ಟಡದ ಗುದ್ದಲಿ ಪೂಜೆ ನಡೆಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಶ್ರೀ ರಾಮಚಂದ್ರ ಗೌಡ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕ ಪ್ರದೀಪ್ ಡಿ ಸೋಜ , ತಾಲೂಕ್ ಪಂಚಾಯತ್ ನ ಸಹಾಯಕ ನಿರ್ದೇಶಕ ಚೆನ್ನಪ್ಪಗೌಡ, ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಸದಾನಂದ ಮತ್ತು ಸದಸ್ಯರಾದ ಮಧುಸೂದನ್, ಚೆನ್ನಕೇಶವ ಗೌಡ, ಸರಿತಾ, ಗಣೇಶ್ ಪಿಲಿಕಜೆ, ಸುಜಾತಾ, ಸುಶೀಲಾ ಹಾಗು ಎನ್.ಆರ್.ಎಲ್.ಎಮ್. ತಾಲೂಕ್ ಸಂಯೋಜಕರಾದ ಜಗತ್ ಹಾಗು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಯಮುನಾ ಕಾರ್ಯದರ್ಶಿ ಬೇಬಿ ಹಾಗು ,ಅಂಗನವಾಡಿ ಕಾರ್ಯಕರ್ತೆಯರು ಹಾಗು ಎಂ.ಬಿ.ಕೆ ಹಾಗು ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಗು ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗು ಗ್ರಾಮ ಸಹಾಯಕರು ಹಾಗು ವಿವಿಧ ಸಖಿಗಳು ಉಪಸ್ಥಿತರಿದ್ದರು.